ಅನ್ನಭಾಗ್ಯದೊಂದಿಗೆ ‘ಇಂದಿರಾ ಆಹಾರ ಕಿಟ್’: ಕಿಟ್ ನಲ್ಲಿ ಏನೆಲ್ಲಾ ಸಿಗಲಿದೆ ಗೊತ್ತೇ!

Oct 9, 2025 - 23:40
Oct 9, 2025 - 23:41
 0  962
ಅನ್ನಭಾಗ್ಯದೊಂದಿಗೆ ‘ಇಂದಿರಾ ಆಹಾರ ಕಿಟ್’:   ಕಿಟ್ ನಲ್ಲಿ ಏನೆಲ್ಲಾ ಸಿಗಲಿದೆ ಗೊತ್ತೇ!
Photo credit: vishwavani

ಬೆಂಗಳೂರು, ಅ.9: ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ‘ಇಂದಿರಾ ಆಹಾರ ಕಿಟ್’ ವಿತರಿಸಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ₹6,119.52 ಕೋಟಿ ವೆಚ್ಚದಲ್ಲಿ ಬಜೆಟ್ ಮರುಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

 ಅವರ ಪ್ರಕಾರ, ಅನ್ನಭಾಗ್ಯ ಯೋಜನೆಗಾಗಿ ಈ ಹಿಂದೆ ಮೀಸಲಿಟ್ಟಿದ್ದ ₹6,426 ಕೋಟಿ ಅನುದಾನದಿಂದ ₹61.19 ಕೋಟಿ ವೆಚ್ಚದಲ್ಲಿ ‘ಇಂದಿರಾ ಆಹಾರ ಕಿಟ್’ಗಳನ್ನು ಒದಗಿಸುವುದಾಗಿ ತೀರ್ಮಾನಿಸಲಾಗಿದೆ. ಆ

ಹಾರ ಕಿಟ್‌ನಲ್ಲಿರುವ ಸಾಮಗ್ರಿಗಳು:

2 ಕೆ.ಜಿ ತೊಗರಿ ಬೇಳೆ 1 ಲೀಟರ್ ಅಡುಗೆ ಎಣ್ಣೆ 1 ಕೆ.ಜಿ ಸಕ್ಕರೆ 1 ಕೆ.ಜಿ ಉಪ್ಪು ಜನತೆಗೆ ಪೌಷ್ಠಿಕಾಂಶಯುತ ಆಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. “ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ ಮತ್ತು ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೌಷ್ಠಿಕ ಆಹಾರ ಕಿಟ್ ವಿತರಿಸುವ ನಿರ್ಧಾರ ಕೈಗೊಂಡಿದ್ದೇವೆ. ಇದರಿಂದ ಫಲಾನುಭವಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ” ಎಂದು ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು..

What's Your Reaction?

Like Like 4
Dislike Dislike 4
Love Love 0
Funny Funny 4
Angry Angry 1
Sad Sad 0
Wow Wow 0