ಮಲಯಾಳಂ ಹುಡುಗಿಯ ಕನ್ನಡ ಪ್ರೀತಿ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 123 ಅಂಕ

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಬಹುತೇಕರಿಗೆ ಅಸಹನೆ ಒಂದೆಡೆಯಾದರೆ ಮತ್ತೊಂದೆಡೆ ಕನ್ನಡದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.ಕನ್ನಡ ಮಾತನಾಡಲು ಹಿಂಜರಿಕೆ ತೋರುತ್ತಿರುವುದು ಸಾಮಾನ್ಯವಾಗಿದೆ.ಬಹುತೇಕರಲ್ಲಿ ಇಂಗ್ಲಿಷ್ ವ್ಯಾಮೋಹವೇ ಹೆಚ್ಚು.ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೂ ಕೂಡ ಕನ್ನಡ ಮಾಧ್ಯಮದಲ್ಲೇ ಕಲಿತರು ಕೂಡ, ಕನ್ನಡವನ್ನು ಓದಲು,ಬರೆಯಲು ಮತ್ತು ಮಾತನಾಡಲು ಬಾರದ ಹಲವು ಮಂದಿ ನಮ್ಮ ನಡುವೆ ಇದ್ದಾರೆ.ಕನ್ನಡ ಮಾಧ್ಯಮದಲ್ಲೇ ಓದಿದರು ಕೂಡ ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆಗೆ ಕಡಿಮೆಯೇನೂ ಇಲ್ಲ.ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲಿ ಅನುತ್ತೀರ್ಣರಾದವರ ಸಂಖ್ಯೆ ಕಡಿಮೆಯೇನೂ ಇಲ್ಲ.ಏತನ್ಮಧ್ಯೆ ತನ್ನ ಪ್ರಾಥಮಿಕ ಶಿಕ್ಷಣವನ್ನು ಕೇರಳದ ಕಣ್ಣೂರಿನಲ್ಲಿ ಮಲಯಾಳಂ ಮಾಧ್ಯಮದಲ್ಲಿ ಪೂರ್ಣಗೊಳಿಸಿದ ವಿದ್ಯಾರ್ಥಿಯೊಬ್ಬಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 123 ಅಂಕಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ.ಮಲಯಾಳಂ ಹುಡಗಿಯ ಕನ್ನಡ ಸಾಧನೆ ಕೊಡಗು ಜಿಲ್ಲೆಯ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಲಯಾಳಂ ಮಾಧ್ಯಮದಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿರುವ ಫಿಜಾ ಎಂಬ ವಿದ್ಯಾರ್ಥಿಗೆ ಕನ್ನಡದ ಗಂಧ-ಗಾಳಿಯೇ ಗೊತ್ತಿರಲಿಲ್ಲ. ಕನ್ನಡವೇನೆಂದೂ ಅರಿಯದ ಹುಡಗಿ ಕೇವಲ ಒಂದು ತಿಂಗಳಲ್ಲಿ ಕನ್ನಡವನ್ನು ಕರಗತ ಮಾಡಿ,ಕನ್ನಡಿಗರೇ ನಾಚುವಂತೆ ಇದೀಗ ಕನ್ನಡ ಮಾತಾನಡುತ್ತಾಳೆ.ಮಲಯಾಳಂ ಭಾಷಿಕ ವಿದ್ಯಾರ್ಥಿನಿಯ ಕನ್ನಡ ಅಭಿಮಾನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊಡಗು ಜಿಲ್ಲೆಯ ಸಿದ್ದಾಪುರ ಇಕ್ರಾ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷಗಳ ಹಿಂದೆ ಎಂಟನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿನಿ ಫಿಜಾ ಇದೀಗ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ ಎಲ್ಲಾ ವಿಷಯದಲ್ಲೂ 625/618 ಅಂಕ ಗಳಿಸುವುದರ ಮೂಲಕ ಶಾಲೆ ಹಾಗೂ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ, ತಾಲೂಕಿನಲ್ಲಿ ಮೂರನೇ ಸ್ಥಾನ, ಜಿಲ್ಲೆಗೆ ನಾಲ್ಕನೇ ಸ್ಥಾನ, ರಾಜ್ಯಕ್ಕೆ 8ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾಳೆ.
ಫಿಜಾ ಕಣ್ಣೂರಿನ ಕೆಎಂಜಿ ಮಲಯಾಳಂ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಿಂದ ಏಳನೇ ತರಗತಿವರೆಗೆ ಮಲಯಾಳಂನಲ್ಲಿ ಪ್ರಾಥಮಿಕ ಶಿಕ್ಷಣ ಕಲಿತ ವಿದ್ಯಾರ್ಥಿನಿ ನಂತರ ವ್ಯಾಪಾರ ಉದ್ಯೋಗ ನಿಮಿತ್ತ ತಂದೆಯೊಂದಿಗೆ ಚೆಟ್ಟಳ್ಳಿಗೆ ಬಂದ ಸಂದರ್ಭ ಮತ್ತೆ ಶಿಕ್ಷಣ ಕಲಿಕೆಗೆ ಆಸಕ್ತಿ ತೋರಿದ್ದಳು.ಪ್ರೌಢಶಿಕ್ಷಣವನ್ನು ಮುಂದುವರಿಸಲು ಇಕ್ರಾ ಪಬ್ಲಿಕ್ ಶಾಲೆಗೆ ಆಗಮಿಸಿ ಎಂಟನೇ ತರಗತಿಯ ದಾಖಲಾತಿಗೆ ಮುಂದಾಗಿದ್ದಳು.ಆಂಗ್ಲ ಮಾಧ್ಯಮ ಶಾಲೆಯಾದರೂ ಕನ್ನಡವು ಕಡ್ಡಾಯವಾಗಿದ್ದು ಕನ್ನಡ ಓದು, ಮಾತನಾಡಲು ಬಾರದ ವಿದ್ಯಾರ್ಥಿನಿಯ ದಾಖಲಾತಿ ಮಾಡಿಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿತ್ತು.ಮತ್ತೆ ಶಾಲೆಗೆ ಬಂದ ವಿದ್ಯಾರ್ಥಿನಿ ಕನ್ನಡ ಕಲಿಕೆಗೆ ಆಸಕ್ತಿ ತೋರಿ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಳು.
ಒಂದು ತಿಂಗಳ ಕಾಲ ಸಮಯವಕಾಶ! ಕನ್ನಡ ಕಲಿತ ಫಿಜಾ!
ಇಕ್ರಾ ಶಾಲೆಯ ಪ್ರಾಂಶುಪಾಲರು ಒಂದು ತಿಂಗಳ ಕಾಲ ಸಮಯಾವಕಾಶ ನೀಡಿ ಕನ್ನಡ ಓದು ಬರಹ ಕಲಿತರೆ ದಾಖಲಾತಿ ಮಾಡಿಕೊಳ್ಳುವ ಭರವಸೆ ಫಿಜಾಗೆ ನೀಡಿದ್ದರು.ಶಾಲೆಯ ಶಿಕ್ಷಕರುಗಳ ಸಹಕಾರದೊಂದಿಗೆ ಅ, ಆ ಎಂಬ ಅಕ್ಷರ ಕಲಿತು ಮುಂದುವರಿಸಿದ ವಿದ್ಯಾರ್ಥಿನಿ 8ನೇ ತರಗತಿಗೆ ಸೇರ್ಪಡೆಗೊಂಡು ಕನ್ನಡ ಓದು ಬರಹ ಅಕ್ಷರಭ್ಯಾಸಕ್ಕೆ ಹೆಚ್ಚು ಹೊತ್ತು ನೀಡುವುದರೊಂದಿಗೆ ಸುಲಲಿತವಾಗಿ ಕಲಿತು ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 125 ಕ್ಕೆ 123 ಅಂಕ ಗಳಿಸುವ ಮೂಲಕ ಇತರ ಪರೀಕ್ಷೆ ವಿಷಯದಲ್ಲೂ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ್ದಾಳೆ. ಕನ್ನಡ ಸಾಹಿತ್ಯ ಅಭಿಮಾನ ಮೈಗೂಡಿಸಿಕೊಂಡಿರುವ ವಿದ್ಯಾರ್ಥಿನಿ ಫಿಜಾ ಕನ್ನಡ ಭಾಷೆಯಲ್ಲಿ ಉತ್ತಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾಳೆ.
ಸತತ 12 ವರ್ಷಗಳಿಂದ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ರಷ್ಟು ಸಾಧನೆ ಮಾಡುವ ಮೂಲಕ ಏಕೈಕ ಶಿಕ್ಷಣ ಸಂಸ್ಥೆಯಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಕಲಿಯುತ್ತಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ಎರಡು ವರ್ಷಗಳ ಹಿಂದೆ ಮೂಲತ ಕೇರಳದಲ್ಲಿ ಮಲಯಾಳಂ ಶಿಕ್ಷಣ ಕಲಿಯುತ್ತಿದ್ದ ವಿದ್ಯಾರ್ಥಿನಿ ಫಿಜಾ ಇಕ್ರಾ ಶಿಕ್ಷಣ ಸಂಸ್ಥೆಗೆ ದಾಖಲಾಗಿ ಇದೀಗ ಎಸ್ ಎಲ್ ಸಿ ಯಲ್ಲಿ ಕನ್ನಡ ಸೇರಿದಂತೆ ಇತರ ವಿಷಯದಲ್ಲೂ ಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ.ಕನ್ನಡದ ಬಗ್ಗೆ ಏನೂ ಅರಿಯದ ವಿದ್ಯಾರ್ಥಿ ಕನ್ನಡ ಭಾಷೆಯ ಅಭಿಮಾನದ ಬಗ್ಗೆ ಎಲ್ಲರಿಗೂ ಮಾದರಿಯಾಗಬೇಕಾಗಿದೆ.
ಕೆ.ಯು ಅಬ್ದುಲ್ ರಜಾಕ್,ಪ್ರಾಂಶುಪಾಲರು ಇಕ್ರಾ ವಿದ್ಯಾ ಸಂಸ್ಥೆ.
------------------------------------------------------------------------------------------
ಪ್ರಾಥಮಿಕ ಶಿಕ್ಷಣವನ್ನ ಕೇರಳದ ಕಣ್ಣೂರಿನಲ್ಲಿ ಮುಗಿಸಿದ್ದು ತಂದೆಯ ಉದ್ಯೋಗ ನಿಮಿತ ಕೊಡಗು ಜಿಲ್ಲೆಯ ಚೆಟ್ಟಳ್ಳಿಗೆ ಆಗಮಿಸಿ ಇಕ್ರಾ ಶಾಲೆಯಲ್ಲಿ ಸೇರ್ಪಡೆಗೊಂಡು ಶಿಕ್ಷಕರುಗಳ ಸಹಕಾರದೊಂದಿಗೆ ಕನ್ನಡ ಓದು ಬರಹವನ್ನು ಕಲಿತು 125ಕ್ಕೆ 123 ಅಂಕದೊಂದಿಗೆ ಇತರ ವಿಷಯದಲ್ಲೂ ಶೇ 100ರಷ್ಟು ಫಲಿತಾಂಶ ಸಿಕ್ಕಿದೆ.ಶೈಕ್ಷಣಿಕ ಕಲಿಕೆಗೆ ಸಹಕಾರ ನೀಡಿದ ಶಿಕ್ಷಣ ಸಂಸ್ಥೆ ಶಿಕ್ಷಕರುಗಳ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಾರೆ.
ಫಿಜಾ,ವಿದ್ಯಾರ್ಥಿ ಇಕ್ರಾ ಪಬ್ಲಿಕ್ ಸ್ಕೂಲ್
What's Your Reaction?






