ಕೂಡಿಗೆ: ಹೂ ಮುಡಿದ ‘ಗುಲ್ ಮೊಹರ್ ಕೆಂಪು ಬಣ್ಣಗಳ ಪುಷ್ಪಲೋಕ ನೋಡ ಬನ್ನಿರಾ!!!

May 12, 2025 - 14:29
 0  46
ಕೂಡಿಗೆ: ಹೂ ಮುಡಿದ ‘ಗುಲ್ ಮೊಹರ್  ಕೆಂಪು ಬಣ್ಣಗಳ ಪುಷ್ಪಲೋಕ ನೋಡ ಬನ್ನಿರಾ!!!
ಕೂಡಿಗೆ: ಹೂ ಮುಡಿದ ‘ಗುಲ್ ಮೊಹರ್  ಕೆಂಪು ಬಣ್ಣಗಳ ಪುಷ್ಪಲೋಕ ನೋಡ ಬನ್ನಿರಾ!!!
ಕೂಡಿಗೆ: ಹೂ ಮುಡಿದ ‘ಗುಲ್ ಮೊಹರ್  ಕೆಂಪು ಬಣ್ಣಗಳ ಪುಷ್ಪಲೋಕ ನೋಡ ಬನ್ನಿರಾ!!!

ವರದಿ: ಕೆ.ಆರ್ ಗಣೇಶ್ ಕೂಡಿಗೆ 

ಕೂಡಿಗೆ:ಹೂವು ಅದರಲ್ಲೂ ವರ್ಷಕ್ಕೊಮ್ಮೆ ಮಾತ್ರ ಅರಳುವ ಮೇ ಫ್ಲವರ್ ಹೂ ಎಲ್ಲರನ್ನೂ ತನ್ನ ಸೆಳೆಯುತ್ತದೆ.ಬೇಸಿಗೆ ಶುರುವಾದಂತೆ ಮರಗಳಲ್ಲಿ ಹೂವು ಹಾಗೂ ಎಲೆಗಳು ಉದುರುತ್ತವೆ.ಆದರೆ ಗುಲ್ ಮೊಹರ್ ಹೂ ಮರಗಳು ಬೇಸಿಗೆಯ ಸುಡು, ಬಿಸಿಲಿನಲ್ಲಿ ಕೆಂಪಾದ ಹೂಗಳನ್ನು ಬಿಟ್ಟು ಕೂಡಿಗೆ ವ್ಯಾಪ್ತಿಯ ಸುತ್ತಮುತ್ತ ಜನರ ಕಣ್ಣುಗಳನ್ನು ತಂಪಾಗಿಸುತ್ತಿದೆ. ಇದು ಕೊಡಗು ಜಿಲ್ಲೆಯ ಕುಶಲನಗರ ತಾಲೂಕಿನ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣ ಹಾಗೂ ಕೂಡಿಗೆಯ ಸರಕಾರಿ ಆಸ್ಪತ್ರೆಯ ಆವರಣ ಹಾಗೂ ಶ್ರೀ ಉದ್ಭವ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುವ ರಸ್ತೆ ಉದ್ದಕ್ಕೂ ಮತ್ತು ಹಾರಂಗಿಯ ರಸ್ತೆ ಉದ್ದಕ್ಕೂ ಅಂದ ಹೆಚ್ಚಿಸುವ ಮೇ ಫ್ಲವರ್ ಹೂವಿನ ಮರಗಳ ಸೊಬಗು ಈಗ ಎಲ್ಲಿ ನೋಡಿದರೂ ಗುಲ್ ಮೊಹರ್ ಮರಗಳ ಸೊಬಗು ಇನ್ನು ಕೆಲವು ಮರಗಳಲ್ಲಿ ಹೂವು ಬಿಟ್ಟು, ಮಳೆಗಾಲದ ಆಗಮನಕ್ಕಾಗಿ ಕಾಣುತ್ತಿದೆ. ಕೂಡಿಗೆ ವ್ಯಾಪ್ತಿಯ ಕೂಡಿಗೆ ಡಯಟ್ ಮೈದಾನ ಪ್ರವಾಸಿಗರನ್ನು ಆಕರ್ಷಿಸುವ ಹಾರಂಗಿ ಸುತ್ತಮುತ್ತ ಎಲ್ಲೆಡೆ ಕೆಂಪು ಹೊದಿಕೆಯಿಂದ ಗಿಡ ಮರಗಳು ನಳ ನಳಿಸುತ್ತಿದೆ.

ಕೆಂಪು ಸೀರೆ ತೊಟ್ಟು ಮದುವಣ ಗಿತ್ತಿಯಂತೆ ಸಿಂಗಾರ ಗೊಂಡು ಈ ಹೂವುಗಳು ಕಂಗೊಳಿಸುತ್ತಿದೆ. ಇದರಿಂದ ದಾರಿ ಹೋಕರಲ್ಲಿ ಮದುವಣ ಗೀತಿಯಂತೆ ಸಿಂಗಾರ ಗೊಂಡು ಸ್ವಾಗತಿಸುವ ಮೇ ಫ್ಲವರ್ ಹೂವಿನ ಮರಗಳು ಅಂದವನ್ನು ನೋಡುವುದೇ ಆನಂದ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0