ಕಣಿವೆ ಬಸವನಳ್ಳಿಯಲ್ಲಿ 15ನೇ ವರ್ಷದ ಅದ್ಧೂರಿ ಗೌರಿ-ಗಣೇಶೋತ್ಸವ ಆಚರಣೆ
admincoorgdaily
ಶನಿವಾರಸಂತೆ :ಕಣಿವೆ ಬಸವನಹಳ್ಳಿ ಗೌರಿ-ಗಣೇಶ ಸೇವಾ ಸಮಿತಿಯ 15ನೇ ವರ್ಷದ ಗೌರಿ ಗಣೇಶ ಮೂರ್ತಿ ವಿಸರ್ಜನೋತ್ಸವ ಅದ್ಧೂರಿಯಾಗಿ ನೆರವೇರಿತು. ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ತೆರಾಳಲಾಯಿತು. ನಂತರ ಸಂಜೆ ಗ್ರಾಮದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಅರ್ಚಕರಾದ ಲಿಂಗರಾಜು ಪೂಜಾ ವಿದೀವಿದಾನಗಳನ್ನು ನಡೆಸಿದರು. ಗ್ರಾಮದ ಪ್ರತಿ ಮನೆ ಮುಂಭಾಗ ತಳಿರು ತೋರಣ ಹಾಗೂ ರಂಗೋಲಿ ಹಾಕಿ ಮೂರ್ತಿಯನ್ನು ಬರ ಮಾಡಿಕೊಂಡು ಪೂಜೆ ಸಲ್ಲಿಸಿದರು. ಶನಿವಾರಸಂತೆ ಪೊಲೀಸ್ ವೃತ್ತ ನೀರಿಕ್ಷಕರಾದ ಕೃಷ್ಣ ರಾಜ್ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. ಡಿಜೆ ಬಳಕೆ ನಿಷೇದ ಇರುವುದರಿಂದ ಶಬ್ದ ನಿಯಂತ್ರಣ ಇರುವ ಧ್ವನಿವರ್ಧಕ ಬಳಸಿಕೊಳ್ಳಲಾಗಿತ್ತು.