ವೀರಾಜಪೇಟೆಯಿಂದ ಕೇರಳದ ಬೈತೂರಪ್ಪ ದೇವಸ್ಥಾನಕ್ಕೆ 4ನೇ ವರ್ಷದ ಪಾದಯಾತ್ರೆ

Jan 25, 2026 - 18:23
 0  1.9k
ವೀರಾಜಪೇಟೆಯಿಂದ ಕೇರಳದ ಬೈತೂರಪ್ಪ ದೇವಸ್ಥಾನಕ್ಕೆ 4ನೇ ವರ್ಷದ ಪಾದಯಾತ್ರೆ

ವಿರಾಜಪೇಟೆ: ಬೈತೂರು ಉತ್ಸವ ಹಿನ್ನೆಲೆ, ಯುವಕರ ತಂಡವೊಂದು ವೀರಾಜಪೇಟೆಯಿಂದ ಕೇರಳದಲ್ಲಿರುವ ಬೈತೂರಪ್ಪ ದೇವಸ್ಥಾನಕ್ಕೆ ಸುಮಾರು 40 ಕಿಮೀವರೆಗೆ ಪಾದಯಾತ್ರೆಯನ್ನು ಮಾಡಿ ದೇವರ ಕೃಪೆಗೆ ಪಾತ್ರರಾದರು.

 ಭಕ್ತರಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಮಾಚಂಗಡ ಸಚಿನ್ ತಮ್ಮಯ್ಯ, ಮುದ್ದಿಯಡ ಕರಣ್ ಕಾವೇರಪ್ಪ, ಚೈಯ್ಯಂಡ ಕೀರ್ತನ್ ಅಯ್ಯಪ್ಪ ಇವರುಗಳೊಂದಿಗೆ ಯುವತಿ ಅಳ್ಳಂಡ ಶಹನಾ ಚೋಂದಮ್ಮ ಪಾದಯಾತ್ರೆ ಮಾಡಿದರು.

ಜನವರಿ 22 ಗುರುವಾರ ಮುಂಜಾನೆ 6 ಗಂಟೆಗೆ ವಿರಾಜಪೇಟೆಯಿಂದ ಪಾದಯಾತ್ರೆ ಪ್ರಾರಂಭಿಸಿದ ಇವರು ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ, ಹುಲಿಕಲ್ ಮೂಲಕ ಪಾದಯಾತ್ರೆ ಮಾಡಿ ಮಧ್ಯಾಹ್ನ 3 ಗಂಟೆಗೆ ಸುಮಾರು 40 ಕಿ.ಮಿ. ಕ್ರಮಿಸಿ ದೇವಸ್ಥಾನ ತಲುಪಿದರು. ನಂತರ ನಾಲ್ಕು ದಿನ ಅಲ್ಲೇ ಸ್ವಯಂಸೇವಕರಾಗಿ ಕೆಲಸ ಕಾರ್ಯ ನಿರ್ವಹಿಸಿ, ಭಾನುವಾರದಂದು ವೀರಾಜಪೇಟೆಗೆ ಹಿಂತಿರುಗಿ ಪ್ರಸಾದ ವಿತರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0