ಕೊಡಗು ಮೂಲದ ನಟಿ ತಾಪಂಡ ಕೃಷಿ ಅವರ ಫ್ಲಾಟ್‌ ನಲ್ಲಿ ಉದ್ಯಮಿ ಆತ್ಮಹತ್ಯೆ

Jun 26, 2026 - 08:21
 0  1.5k
ಕೊಡಗು ಮೂಲದ ನಟಿ ತಾಪಂಡ ಕೃಷಿ ಅವರ  ಫ್ಲಾಟ್‌ ನಲ್ಲಿ   ಉದ್ಯಮಿ ಆತ್ಮಹತ್ಯೆ

ಕೋವರ್‌ ಕೊಲ್ಲಿ ಇಂದ್ರೇಶ್‌

ಬೆಂಗಳೂರು: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ಕನ್ನಡ ನಟಿ ಕೊಡಗು ಮೂಲದ ಕೃಷಿ ತಾಪಂಡ ಅವರ ಮನೆಯಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.ಪೊಲೀಸರ ಪ್ರಕಾರ, ಬುಧವಾರ ರಾತ್ರಿ 8:30 ರ ಸುಮಾರಿಗೆ ಈ ಘಟನೆ ನಡೆದಿದ್ದು, . ಮೃತರನ್ನು ವೈಶಾಕ್ ಎಂದು ಗುರುತಿಸಲಾಗಿದೆ.  

ವೈಶಾಖ್‌ ಅವರಿಗೆ ಪತ್ನಿ ಮಕ್ಕಳಿದ್ದು ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆಗಾಗ್ಗೆ ಜಗಳಗಳ ನಂತರ ಅವರು ಸುಮಾರು ಒಂದು ತಿಂಗಳಿನಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ ಗುರುವಾರ ಅಂತ್ಯಕ್ರಿಯೆ ನಡೆಸಲಾಗಿದೆ.

 ವೈಶಾಕ್‌ ಅವರಿಗೆ 15 ವರ್ಷಗಳ ಹಿಂದೆಯೇ ಮದುವೆ ಆಗಿದ್ದು, ಅವರಿಗೆ 13 ವರ್ಷದ ಮಗನಿದ್ದಾನೆ. ವೈಶಾಕ್ ಅವರು ಕಾರು ಆಟೋ ಮೊಬೈಲ್ ಹಾಗೂ ಗ್ಯಾರೇಜ್ ಇಟ್ಟುಕೊಂಡಿದ್ದು, ನಟಿ ಕೃಷಿ ತಾಪಂಡ ಅವರ ಮಾಜಿ ಸ್ನೇಹಿತ ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿರುವ ಆರೋಪದಲ್ಲಿ ಬಂಧನಕ್ಕೀಡಾಗಿದ್ದರು. ಅವರನ್ನು ಈ ಹಿಂದೆ ಎಚ್‌ಎಎಲ್ ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡು ಐದು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಕರ್ನಾಟಕ ಹೈಕೋರ್ಟ್ ಫೆಬ್ರವರಿ 6 ರಂದು ವೈಶಾಕ್ ವಿರುದ್ಧ ಹೆಚ್ಚಿನ ತನಿಖೆಗೆ ತಡೆ ನೀಡಿತ್ತು.

ಈ ಹಿಂದೆ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ (ಎವಿಆರ್‌) ಜತೆ ಕೃಷಿ ಇದ್ದರು. ಆನಂತರ ಹೊಂದಾಣಿಕೆ ಆಗುತ್ತಿಲ್ಲ ಎಂದು ಬ್ರೇಕಪ್ ಮಾಡಿಕೊಂಡಿದ್ದರು. ಬಳಿಕ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಪೋಲೀಸರಲ್ಲಿ ದೂರು ನೀಡಿದ್ದರು. ಅಂದು ಅರವಿಂದ್ ವೆಂಕಟೇಶ್ ರೆಡ್ಡಿ ಅರೆಸ್ಟ್ ಆಗಿ ಬಳಿಕ ಜಾಮೀನಿನ ಮೇಲೆ ಹೊರಬಂದರು.ಇದಾದ ನಂತರ ಕೃಷಿ ಹಾಗೂ ವೈಶಾಖ್ ಮೇಲೆಯೇ ಅರವಿಂದ್ ವೆಂಕಟೇಶ್ ರೆಡ್ಡಿ ಗಂಭೀರ ಆರೋಪಗಳನ್ನ ಹೊರಿಸಿದ್ದರು.  

ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ವೈಶಾಕ್ ಹಾಗೂ ಪತ್ನಿ ಮಧ್ಯೆ ಆಗಾಗ್ಗ ಜಗಳ ಆಗುತ್ತಿತ್ತು ಎನ್ನಲಾಗಿದೆ. ಪತ್ನಿ ಜೊತೆ ಜಗಳ ಆದಾಗ ಕೃಷಿ ಮನೆಗೆ ಬಂದು ಉಳಿಯುತಿದ್ದರು.

ಪತಿಯ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಉದ್ಯಮಿ ಪತ್ನಿ ಮೇಘನಾ ಅವರು ಆರ್ ಆರ್ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಬುಧವಾರ ರಾತ್ರಿ 11.30ರ ಸುಮಾರಿಗೆ ಪೊಲೀಸ್ ರಿಂದ ನಮಗೆ ಮಾಹಿತಿ ಬಂತು. ನಾವು ಫ್ಲಾಟ್ ಗೆ ಹೋಗಿ ನೋಡಿದಾಗ, ಕೃಷಿ ತಾಪಂಡ ಬೆಡ್ರೂಮ್ನಲ್ಲಿ ಫ್ಯಾನಿಗೆ ನೇಣಿಗೆ ಶರಣಾಗಿದ್ದು, ಅಂಗಾತ ಮಲಗಿರುವ ರೀತಿಯಲ್ಲಿ ಮೃತ ದೇಹ ಕಂಡು ಬಂದಿತು ಎಂದು ಹೇಳಿದ್ದಾರೆ. ನನ್ನ ಹಾಗೂ ನನ್ನ ಪತಿ ಮಧ್ಯೆ ಸಾಕಷ್ಟು ವಿರಸ ಇತ್ತು. ನಮ್ಮಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಲೆ ಇತ್ತು. ಕೇವಲ ಮೆಸೇಜ್‌ ಮೂಲಕ 13 ವರ್ಷದ ಮಗನ ಬಗ್ಗೆ ವಿಚಾರಿಸುತ್ತಿದ್ದರು. ಆದ್ರೆ ನನ್ನ ಬಗ್ಗೆ ಏನೂ ಕೇಳುತ್ತಿರಲಿಲ್ಲ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 ಗೆಳೆಯ ವೈಶಾಖ್‌ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ನಟಿ ಕೃಷಿ ಅವರೇ ಪೊಲೀಸರಿಗೆ ತಿಳಿಸಿದ್ದರು ಎಂಬ ವಿಚಾರ ತಿಳಿದುಬಂದಿದೆ. ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಅವರು ಯಲಹಂಕದಲ್ಲಿದ್ದರು. ಈ ವೇಳೆ ಹಲವು ಬಾರಿ ಕೃಷಿ ಅವರಿಗೆ ವೈಶಾಖ್‌ ಕರೆ ಮಾಡಿದ್ದರು. ಆದರೆ ಬಿಝಿ ಇದ್ದ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ರಾತ್ರಿ 8:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್‌ ಮೆಸೆಜ್‌ ಕಳಿಸಿದ್ದರು.

 ಕೂಡಲೇ ವಾಪಸ್‌ ಕರೆ ಮಾಡಿದ ಕೃಷಿ ಸಮಾಧಾನಿಸಿ ಮನವೊಲಿಸಿದ್ದರು ಆಗ ಮನಸ್ಸಿನ ನೆಮ್ಮದಿಗೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗೋಣ ಬಾ ಎಂದು ವೈಶಾಖ್‌ ಕರೆದಿದ್ದರು.

ಅದಕ್ಕೆ ಕೃಷಿ ಒಪ್ಪಿದ್ದರು. ರಾತ್ರಿ 11.30 ಕ್ಕೆ ತಾವು ವಾಸವಾಗಿದ್ದ ಆರ್‌ಆರ್‌ ನಗರದ ಎಲಿಗೆಂಟ್‌ ಟೆರೇಸ್‌ ಅಪಾರ್ಟ್ಮೆಂಟ್‌ ನ ಬಿ ಬ್ಲಾಕ್ 4ನೇ ಪ್ಲೋರ್‌ನ 403ನೇ ಫ್ಲಾಟ್‌ಗೆ ಬಂದ ಕೃಷಿ ತಮ್ಮ ಬಳಿ ಇದ್ದ ಮತ್ತೊಂದು ಕೀ ಯಿಂದ ಡೋರ್‌ ಒಪನ್‌ ಮಾಡಿ ಒಳಗೆ ಹೋದಾಗ ವೈಶಾಖ್‌ ಬೆಡ್‌ ರೂಂ ನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಕೃಷಿ ಪೋಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0