ನೆಲ್ಲಿಹುದಿಕೇರಿಯಲ್ಲಿ ನೈಮ ಸಂಘಟನೆಯಿಂದ ಬೃಹತ್ ಇಫ್ತಾರ್ ಸಂಗಮ

ನೆಲ್ಲಿಹುದಿಕೇರಿಯಲ್ಲಿ ನೈಮ ಸಂಘಟನೆಯಿಂದ ಬೃಹತ್ ಇಫ್ತಾರ್ ಸಂಗಮ

ಮಡಿಕೇರಿ:- ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನೈಮ ಸಂಘಟನೆ ರಂಜಾನ್ ಉಪವಾಸ ಆಚರಣೆಯ ಅಂಗವಾಗಿ ಬೃಹತ್ ಇಫ್ತಾರ್ಸೌಹಾರ್ದ ಸಂಗಮವನ್ನು ನೆಲ್ಲಿಹುದಿಕೇರಿ ಶಾದಿ ಮಹಲ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಉಪವಾಸ ನಿರತ ಬಾಂಧವರಿಗೆ ಇಫ್ತಾರ್ ಕೂಟದಲ್ಲಿ ಆಯೋಜಿಸಲಾಗಿದ್ದ ಸಂಗಮದಲ್ಲಿ ಅರೆಕಾಡು,ನಲ್ವತ್ತೆಕ್ರೆ,ಸಿದ್ದಾಪುರ,ಗುಯ್ಯ,ಒಂಟಿಯಂಗಡಿ,ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಾಂದವರು ಸೌಹಾರ್ದತವಾಗಿ ಪಾಲ್ಗೊಂಡಿದ್ದರು.

ಇಫ್ತಾರ್ ನಲ್ಲಿ ವಿವಿಧ ಬಗ್ಗೆಯ ಹಣ್ಣು ಹಂಪಲು, ತಂಪು ಪಾನೀಯ, ತಿಂಡಿ ತಿನಿಸುಗಳೊಂದಿಗೆ ಬಿರಿಯಾನಿ ಊಟದ ವ್ಯವಸ್ಥೆಯು ಮಾಡಲಾಗಿತ್ತು.

ಮಹಲ್ ಖತೀಬ್ ರೌವೂಪ್ ಹುದವಿ ಮಾತನಾಡಿ  ಪವಿತ್ರ ರಂಜಾನ್, ಉಪವಾಸದ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಿ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ ಅವರು ವಿಶೇಷ ದುವಾ ಪ್ರಾರ್ಥನೆ ನೆರವೇರಿಸಿದರು.

ಸಾಮಾಜಿಕ ಕಾರ್ಯಕರ್ತ ನಿಯಾಜ್ ಮಾತನಾಡಿ  ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕಳೆದ 5 ವರ್ಷಗಳಿಂದ ಆರೋಗ್ಯ, ಶೈಕ್ಷಣಿಕ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಯುವ ಸಮೂಹವನ್ನ ಒಗ್ಗೂಡಿಕೆಯೊಂದಿಗೆ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಾದರಿಯಾಗಿರುವ ನೈಮ ಸಂಘಟನೆ 5ನೇ ವರ್ಷದ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವುದರ ಮೂಲಕ ಬಾಂಧವರನ್ನ ಒಗ್ಗೂಡಿಸಿ ಸೌಹಾರ್ದ ಸಂಗಮ ನಿರ್ಮಾಣ ಮಾಡಿದ್ದಾರೆ.

ಶಾಂತಿ ಸಹ ಬಾಳ್ವೆಯ ಸೌಹಾರ್ದ ಸಂಕೇತದ ಆಚರಣೆಗಳನ್ನು ಮಾಡುವುದರ ಮೂಲಕ ಸಹೋದರತ್ವದೊಂದಿಗೆ ಸಹಬಾಳ್ವೆಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.

ನೈಮ ಸಂಘಟನೆಯ ಸಂಯೋಜಕ ಶರ್ಫು, ಮಾತನಾಡಿ ಕಳೆದ ಹಲವು ವರ್ಷಗಳಿಂದ ನಮ್ಮ ಸಂಘಟನೆ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಯುವ ಸಮೂಹ 

ಶಿಕ್ಷಣದ ಮೂಲಕ ಪ್ರತಿಭಾವಂತರಾಗಿ ಮುಂದೆ ಬರಲು ಕಲಿಕಾ ತರಬೇತಿ, ಮಾಹಿತಿ ಕಾರ್ಯಗಾರ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನ ಮಾಡಲಾಗಿದ್ದು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು.

ಡಿ ಸಿ ಸಿ ಸದಸ್ಯ ಕೆ.ಎಂ ಬಸೀರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ ಕೆ ಹಕೀಂ,ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಕೆ ಎಮ್ ಸೈಯದ್ ಅಲವಿ ಭಾವ,ಕೊಡಗು ಉಮ್ಮತ್ ಒನ್ ಸಂಘಟನೆಯ ಪ್ರಮುಖರಾದ ಖಾಲಿದ್ ಹಾಜಿ, ಪ್ರಮುಖರಾದ ಉನ್ಯಸ್ ಮಡಿಕೇರಿ, ಹುಸೇನ್ ಸಾಬ್, ಅಬ್ದುಲ್ ನಬಿ, ಕ್ರಿಯೇಟಿವ್ ಕಲೀಲ್ ಮಡಿಕೇರಿ, ಹಸ್ಯನಾರ್ ಹಾಜಿ,   ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಓ ಎಂ ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಅಶ್ರಫ್ ಹಾಜಿ, ಎ. ಕೆ ಅಬ್ದುಲ್ಲ,ಮಣಿ ಮಾಸ್ಟರ್ ,ಪಿ ಎ ಅಬ್ದುಲ್ಲ,ನೈಮ ಸಂಘಟನೆ ಅಧ್ಯಕ್ಷ ಓ. ಎಂ ನೌಷದ್, ಉಪಾಧ್ಯಕ್ಷ ಅಪ್ಸಲ್ ,ಕಾರ್ಯದರ್ಶಿ ಮುಸ್ತಾಫಾ,ಜೊತೆ ಕಾರ್ಯದರ್ಶಿ ಜಂಶೀರ್, ಕೋಶಾಧಿಕಾರಿ ಅನಸ್,ಪಿಡಿಓ ಅಬ್ದುಲ್ಲ, ಸಹಾಯಕ ಪ್ರಾಧ್ಯಾಪಕ ನೌಶಾದ್, ಯೂಸುಫ್ ಅಲಿ ಅರೆಕಾಡು ಸೇರಿದಂತೆ ಸುತ್ತಮುತ್ತಲ ಗ್ರಾಮದ ಮಹಲ್ಗಳ ಮುಖಂಡರುಗಳು ನೈಮ ಸಂಘದ ಸದಸ್ಯರು,ಪದಾಧಿಕಾರಿಗಳು ಸಂಘಸಂಸ್ಥೆಗಳ ಪ್ರಮುಖರು ಸೇರಿದಂತೆ ಇತರರು ಹಾಜರಿದ್ದರು.