ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಏ.01ರಂದು ಬೃಹತ್ ಹಿಂದೂ ಜನಜಾಗೃತಿ ಜಾಥಾ ಮತ್ತು ಸಮಾವೇಶ

Mar 28, 2026 - 16:41
 0  314
ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಏ.01ರಂದು ಬೃಹತ್ ಹಿಂದೂ ಜನಜಾಗೃತಿ ಜಾಥಾ ಮತ್ತು ಸಮಾವೇಶ

ಮಡಿಕೇರಿ: ನಾಪೋಕ್ಲು ಪಟ್ಟಣದಲ್ಲಿ ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಏ.೧ ರಂದು ಬೃಹತ್ ಹಿಂದೂ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಯೋಜಕ ಲವ ನಾಣಯ್ಯ ತಿಳಿಸಿದ್ದಾರೆ.

ಇತ್ತೀಚೆಗೆ ನಾಪೋಕ್ಲು ಪಟ್ಟಣದಲ್ಲಿ ಹಿಂದೂ ಯುವಕ ಗೌತಮ್ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಬಹುಸಂಖ್ಯಾತ ಹಿಂದೂ ಸಮಾಜವನ್ನು ಸಂಘಟಿಸಿ ಜಾಗೃತಗೊಳಿಸುವ ಉದ್ದೇಶದಿಂದ ನಾಪೋಕ್ಲು ಪಟ್ಟಣದಲ್ಲಿ ಬೃಹತ್ ಹಿಂದೂ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ ೧೧ ಗಂಟೆಗೆ ನಾಪೋಕ್ಲುವಿನ ಹಳೇ ತಾಲ್ಲೂಕು ವೃತ್ತದಿಂದ ಜಾಥಾ ಆರಂಭವಾಗಲಿದೆ. ನಂತರ ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಜನಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಮುಖರಾದ ಕುಕ್ಕೆರ ಅಜಿತ್ ಮಾತನಾಡಿ, ಸಂಘ ಶತಾಬಿ ಹಿನ್ನೆಲೆಯಲ್ಲಿ ದೇಶಾದ್ಯಂತ ಇತ್ತೀಚೆಗೆ ಹಿಂದೂ ಸಮಾಜೋತ್ಸವ ಮತ್ತು ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಸಂಘಟಿತ ಹಿಂದೂ ಸಮಾಜವು ಒಟ್ಟಾಗಿ ಆಯೋಜನೆ ಮಾಡಿತ್ತು. ಕೊಡಗು ಜಿಲ್ಲೆಯಲ್ಲಿಯೂ ಸುಮಾರು ೮೦ಕ್ಕೂ ಅಧಿಕ ಹಿಂದು ಸಂಗಮ ಕಾರ್ಯಕ್ರಮಗಳು ಸಂಭ್ರಮ ಮತ್ತು ಸಡಗರದಿಂದ ಅರ್ಥಪೂರ್ಣವಾಗಿ ನಡೆಯಿತು.

ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರತೀ ಮಂಡಲಗಳಲ್ಲಿ ಸಾವಿರಾರು ಹಿಂದು ಬಾಂಧವರು, ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಕೊನೆಯ ಹಂತದ ಕಾರ್ಯಕ್ರಮ ಬಲ್ಲಮಾವಟಿ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ ಸಂದರ್ಭ ಕಾರ್ಯಕ್ರಮದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬಲ್ಲಮಾವಟಿಯ ಹಿಂದೂ ಕಾರ್ಯಕರ್ತ ಗೌತಮ್ ಎಂಬವರ ಮೇಲೆ ಮತಾಂಧ, ಭಯೋತ್ಪಾಧಕ ಸಮಾಜಘಾತಕ ಯುವಕರ ತಂಡವು ಈ ಕಾರ್ಯಕ್ರಮವನ್ನು ಹಾಳುಗೆಡಹುವ ಉದ್ದೇಶದಿಂದ ಹಲ್ಲೆ ನಡೆಸಿರುವುದು ತೀವ್ರ ಖಂಡನೀಯವಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿಯೂ ಕೂಡ ಇಂತಹ ವಿದ್ರೋಹಿ, ಸಮಾಜಘಾತಕ, ದೇಶದ್ರೋಹಿ ಮತಾಂಧರು ವಿದ್ರೋಹಿ ಕೃತ್ಯದಲ್ಲಿ ತೊಡಗಿರುವುದು ಕಂಡುಬರುತ್ತದೆ. ಪ್ರಸ್ತುತ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹಿಂದುಗಳು ಭಯಭೀತರಾಗಿ ಬದುಕುವ ಸನ್ನಿವೇಶ ಸೃಷ್ಟಿಸುತ್ತಿರುವುದು ಗೋಚರಿಸುತ್ತಿದೆ. ಅಲ್ಲದೆ ಕೊಡಗು ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆಯು ಹೆಚ್ಚುತಿದೆ.

ಮಾರುಕಟ್ಟೆ ಇನ್ನಿತರ ಪ್ರದೇಶಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ವ್ಯಾಪಾರ, ಗಾಂಜಾ ಮಾರಾಟ, ಗೋ ಹತ್ಯೆಯಂತಹ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಜಿಲ್ಲಾಡಳಿತ ಜಿಲ್ಲಾ, ಜಿಲ್ಲಾ ಪೊಲೀಸ್ ಇಲಾಖೆ ಇಂತಹ ದುಷ್ಕೃ ಶಕ್ತಿಗಳನ್ನು ಸದೆ ಬಡಿದು ಮತಾಂಧ ದೇಶದ್ರೋಹಿ ಸಮಾಜಘಾತಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಬಾಲಕೃಷ್ಣ ರೈ, ಪ್ರತೀಪ್, ಪ್ರತಿಭಾ, ಚಂದ್ರ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0