ದಿಢೀರ್ ಎದುರಾದ ಕಾಡಾನೆ :ಸ್ಕೂಟರ್ ಸವಾರನಿಗೆ ಗಾಯ

Apr 11, 2026 - 15:42
Apr 11, 2026 - 15:47
 0  1.1k
ದಿಢೀರ್ ಎದುರಾದ ಕಾಡಾನೆ :ಸ್ಕೂಟರ್ ಸವಾರನಿಗೆ ಗಾಯ

ಕುಟ್ಟ; ಸಮೀಪ ಕಾಯಿಮಾನಿ ಬಳಿ ರಸ್ತೆ ದಾಟುತ್ತಿದ್ದ ಕಾಡಾನೆಯನ್ನು ಕಂಡು ಭಯಬೀತಗೊಂಡ ವಾಹನ ಸವಾರ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಗಾಯಗೊಂಡಿರುವ ಘಟನೆ ಕಾಯಿಮಾನಿ ಕಾಫಿ ಮಿಲ್ ಸಮೀಪ ನಡೆದಿದೆ. ಪೂಜೆಕಲ್ಲ್ ನಿವಾಸಿ ಅರ್ಮುಗಮ್(65) ಗಾಯಗೊಂಡ ಸ್ಕೂಟರ್ ಸವಾರ.

ಅಲ್ಲಿಯೇ ಶ್ರೀಮಂಗಲ ಅರಣ್ಯ ಇಲಾಖೆಯ ಸಿಬ್ಬಂದಿ ಬೀಟ್ 'ನಲ್ಲಿದ್ದವರಿಗೆ ವಿಷಯ ತಿಳಿದು, ಕುಟ್ಟ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

ಶಾಸಕ ಪೊನ್ನಣ್ಣ ಆದೇಶದಂತೆ ಮುಖ್ಯ ರಸ್ತೆ ಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಬೀಟ್ ನಲ್ಲಿರುವಂತೆ ಸೂಚನೆ ನೀಡಿದ್ದು, ಸಾರ್ವಜನಿಕರಯಿಂದ ಕಾಡಾನೆ ಇರುವಿಕೆ ಬಗ್ಗೆ ಮಾಹಿತಿ ಬಂದ ತಕ್ಷಣ ನಿಗಾ ಇಡುವಂತೆ ಸೂಚಿಸಿದ ಹಿನ್ನಲೆ, ಮುಖ್ಯ ರಸ್ತೆ, ಕಾಡಾನೆ ಇರುವಿಕೆಯ ಸುಳಿವು ಇರುವೆಡೆ ಬೀಟ್ ಕೈಗೊಳ್ಳುವಂತೆ ಸೂಚನೆ‌‌ ನೀಡಿದ್ದಾರೆ. ಈ ಹಿನ್ನಲೆ ಶ್ರೀಮಂಗಲ ವಲಯ ಅರಣ್ಯಧಿಕಾರಿ ಅರವಿಂದ್ ನೇತೃತ್ವದಲ್ಲಿ ಕುಟ್ಟ -ಕಾಯಿಮಾನಿ ಸುತ್ತಮುತ್ತ ಬೆಳ್ಳಿಗ್ಗೆ 6 ರಿಂದ ಸಂಜೆ 8 ರವರೆಗೆ ಅರಣ್ಯ ಸಿಬ್ಬಂದಿ ಬೀಟ್‌ ವಹಿಸಲು ನಿರ್ಧಾರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1