Kodagu

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡಿದ ಕಾಡಾನೆ

admincoorgdaily

ಕೊಡ್ಲಿಪೇಟೆ : ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ತನ್ನ ಮನೆಯ ಮುಂಭಾಗ ಹಾರೂನ್ ಎಂಬವರು ನಿಲ್ಲಿಸಿದ್ದ ಕಾರಿಗೆ ಶನಿವಾರ ತಡ ರಾತ್ರಿ ಕಾಡಾನೆಯೊಂದು ಹಾನಿಗೊಳಿಸಿದ ಘಟನೆ ನಡೆದಿದೆ. ಒಂಟಿ ಕಾಡಾನೆಯೊಂದು ಕಳೆದ ಒಂದು ವಾರದಿಂದ ಸಮೀಪದ ಕಣಾರಳ್ಳಿ ಗ್ರಾಮದ ಕಾಡು,ತೋಟವೊಂದರಲ್ಲಿ ಬೀಡು ಬಿಟ್ಟಿದ್ದು ರಾತ್ರಿ ಸಮಯದಲ್ಲಿ ಗ್ರಾಮದ ಸುತ್ತಮುತ್ತಲಿನ ಬ್ಯಾಡಗೊಟ್ಟ ,ಬೆಂಬಳೂರು ,ಊರುಗುತ್ತಿ,ಮಲ್ಲಳ್ಳಿ ,ಶಿವರಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಮನೆಯ ಆವರಣದಲ್ಲಿ ಬೆಳೆದಿರುವ ಬಾಳೆ /ತೆಂಗು ಗಿಡಗಳಿಗೆ ಹಾಗೂ ತೋಟ ,ಗದ್ದೆಗಳಲ್ಲಿ ಸಂಚರಿಸಿ ಬೆಳೆ ಹಾನಿ ಮಾಡುತ್ತಿದೆ.

 ಶನಿವಾರ ತಡರಾತ್ರಿ ಮನೆ ಮುಂಭಾಗ ರಸ್ತೆಬದಿ ನಿಲ್ಲಿಸಿದ್ದಂತಹ ಕಾರಿಗೆ ಹಾನಿಗೊಳಿಸಿದೆ.ಆನೆಯನ್ನು ಸೆರೆಹಿಡಿದಯಬೇಕೆಲು, ಸ್ಥಳಿಯವಾಗಿ ಉಪ ವಲಯಾರಣ್ಯಾಧಿಕಾರಿಗೆ ವಾಹನವನ್ನು ನೀಡಬೇಕು, ಅರಣ್ಯ ಇಲಾಖೆ ಬೆಳೆ ಹಾನಿಯಾದ ಕೃಷಿಕರಿಗೆ ಹಾಗೂ ಕಾರಿನ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಕಾರಿನ ಮಾಲಿಕ ಹಾರೂನ್ ರವರು ಸೂಕ್ತ ಪರಿಹಾರ ಕಲ್ಪಿಸುವಂತೆ ಕೊರಿದರು, ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ವಾಟರ್ ಮ್ಯಾನ್ ಯುವರಾಜ್ ಮಾತನಾಡಿ ಮುಂಜಾನೆ ನೀರು ಬಿಡಲು ಹೊಗುವಾಗ ಹೆದರಿಕೆಯಾಗುತ್ತಿದೆ, ಹಲವು ದಿನಗಳಿಂದ ಈ ಆನೆ ಈ ಬಾಗದಲ್ಲಿ ಸಂಚರಿಸುತ್ತಿದ್ದು , ಮನೆ ಹಿಂಭಾಗದಲ್ಲಿ ಹಾಕಿದ್ದಂತಹ ಬಾಳೆ ಗೀಡ ಹಾಗೂ ತೋಟಗಳಲ್ಲಿ ಗೀಡಗಳಿಗೆ ಹಾನಿ ಮಾಡಿದೆ ಇದನ್ನು ಆದಷ್ಟು ಬೇಗ ಸ್ಥಳಾಂತರಿಸಬೆಕೆಂದು ಒತ್ತಾಯಿಸಿದರು.

‌ಆನೆಯು ರಾತ್ರಿಯಿಡೀ ಸುತ್ತಾಡಿ ಹಗಲು ಕಣಾರಳ್ಳಿಯಲ್ಲಿರುವ ಹಾಳು ಬಿಟ್ಟಿರುವ ದಿವಗಂತ ಜಬ್ಬಾರ್ ಸಾಬ್ರು ಎಂಬುವರ ಮಕ್ಕಳ ಹೆಸರಿನಲ್ಲಿರುವ ತೋಟದಲ್ಲಿ ಬೀಡು ಬಿಟ್ಟಿದೆ. ಈ ತೋಟವು ಆನೆಗಳ ನಿತ್ಯವಾಸ ಸ್ಥಳವಾಗಿದೆ. ಈ ತೋಟದ ಮಾಲಿಕರಿಗೆ ಸಂಬಂಧಪಟ್ಟವರು ಮಾಹಿತಿ ನೀಡಬೇಕು ಗ್ರಾಮಸ್ಥರು ಆಗ್ರಹಿಸಿದ್ದಾರೆ.