ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಸಾವು
ಕುಶಾಲನಗರ: ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಮುಳುಗಿ ಮೃತಪಟ್ಟ ಘಟನೆ ಹುದುಗೂರು ಬಳಿ ನಡೆದಿದೆ. ಕೂಡಿಗೆ ಬಸವರಾಜು ಎಂಬವರ ಪುತ್ರ ಸಂತೋಷ (28) ಮೃತ ದುರ್ದೈವಿ. ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ನಾಲೆಯಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ದಳ ಮೃತದೇಹ ಶೋಧ ಕಾರ್ಯ ನಡೆಸುತ್ತಿದೆ.