ಗುಡ್ಡೆಹೊಸೂರು- ಹಾಸನ ಹೆದ್ದಾರಿಯಲ್ಲಿ ಎಎನ್ ಪಿ ಆರ್ ಕ್ಯಾಮರಾ ಚಾಲನೆ: ವಾಹನಗಳು ಕ್ಯಾಮರಾದ ಕಣ್ಗಾವಲಿನಲ್ಲಿ

ಗುಡ್ಡೆಹೊಸೂರು- ಹಾಸನ  ಹೆದ್ದಾರಿಯಲ್ಲಿ ಎಎನ್ ಪಿ ಆರ್ ಕ್ಯಾಮರಾ  ಚಾಲನೆ:  ವಾಹನಗಳು ಕ್ಯಾಮರಾದ ಕಣ್ಗಾವಲಿನಲ್ಲಿ

ಕುಶಾಲನಗರ:ಗುಡ್ಡೆಹೊಸೂರು ಸರ್ಕಲ್, ಮೈಸೂರು ಮಡಿಕೇರಿ ರಸ್ತೆ, ಹಾಸನ ಹೆದ್ದಾರಿ ಕೂಡಿಗೆಯಿಂದ ಕುಶಾಲನಗರ ಕ್ಕೆ ಹೋಗುವ ಕೂಡಿಗೆ ಮಾರ್ಗ ಮಧ್ಯೆ ಕೂಡ್ಲೂರು ಕೈಗಾರಿಕಾ ಕೇಂದ್ರದ ಸರ್ಕಲ್ ನ ಹೆದ್ದಾರಿ ರಸ್ತೆಯಲ್ಲಿ ನೂತನ ತಂತ್ರಜ್ಞಾನದ ಎ‌ ಎನ್.ಪಿ.ಆರ್. ಕ್ಯಾಮರಾ ಅಳವಡಿಸಲಾಗಿದ್ದು ಇದೀಗ ಚಾಲನೆಗೊಂಡಿವೆ.

 ವಾಹನಗಳು ಕ್ಯಾಮರಾದ ಕಣ್ಗಾವಲಿನಲ್ಲಿವೆ,ವಾಹನಗಳ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ ಮನವಿ ಮಾಡಿರುತ್ತಾರೆ.

ವಾಹನಗಳ ಚಾಲನೆ ಸಂದರ್ಭದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು, ಓವರ್ ಸ್ಪೀಡ್, ತ್ರಿಬ್ಬಲ್ ರೈಡಿಂಗ್, ಅತಿ ವೇಗವಾಗಿ ಡ್ರೈವಿಂಗ್, ಯರ್ರಾಬಿರ್ರಿ ಪಾರ್ಕಿಂಗ್ ಇತ್ಯಾದಿ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಡಿವಾಣ ಹಾಕಲು ಸಿ.ಸಿ. ಕ್ಯಾಮರಾವನ್ನು ಜಿಲ್ಲೆಯ ಕೈಗಾರಿಕಾ ಕೇಂದ್ರದ ಕಾಫಿ ಉದ್ಯಮಿಗಳ, ಮತ್ತು ಸಾರ್ವಜನಿಕ ಸಹಕಾರದೊಂದಿಗೆ ಇಲಾಖೆಯ ನಿಯಮಾನುಸಾರ ಆಳವಡಿಗೆ ಮಾಡಿಲಾಗಿದೆ.

 ಸಾರ್ವಜನಿಕರು ಸಹಕಾರ ನೀಡುವಂತೆ ಠಾಣಾಧಿಕಾರಿ ರಾಮಚಂದ್ರ ತಿಳಿಸಿದ್ದಾರೆ. ಇದು ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು, ಕ್ಯಾಮರಾದಲ್ಲಿ ಸೆರೆ ಆದಲ್ಲಿ ಅಟೋಮ್ಯಾಟಿಕ್ ಆಗಿ ಅದಕ್ಕೆ ಸಂಬಂಧಿಸಿದ ದಂಡ ವಾಹನದ ಮಾಲೀಕರಿಗೆ ರವಾನೆ ಆಗಲಿದೆ. ಎಂದು ತಿಳಿಸಿದ್ದಾರೆ.