KSRTC ಬಸ್ಸ್ ಹಾಗೂ ಜೆಸಿಬಿ ನಡುವೆ ಅಪಘಾತ:ಮಡಿಕೇರಿ ದಸರಾ ಡ್ಯೂಟಿಗೆ ತೆರಳುತ್ತಿದ್ದ 7 ಮಂದಿ ಹೋಂ ಗಾರ್ಡ್ಸ್ ಸೇರಿ 13ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ
ಕುಶಾಲನಗರ: ಮಡಿಕೇರಿ-ಕುಶಾಲನಗರ ಹೆದ್ದಾರಿಯಲ್ಲಿ ಜೆಸಿಬಿ ಹಾಗೂ KSRTC ಬಸ್ ನಡುವೆ ಅಪಘಾತ ಸಂಭವಿಸಿ 13ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಸ್ ನಲ್ಲಿದ್ದ 13 ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಗಾಯಾಳುಗಳಿಗೆ ಸೈರಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಾಳುಗಳ ಪೈಕಿ 7 ಮಂದಿ ಹೋಂ ಗಾರ್ಡ್ ಗಳಾಗಿದ್ದಾರೆ. ಮಡಿಕೇರಿ ದಸರಾ ಡ್ಯೂಟಿಗೆ ತೆರಳುತ್ತಿದ್ದ ಹೋಂ ಗಾರ್ಡ್ಸ್ ಗಳಿಗೆ ಅಪಘಾತದಲ್ಲಿ ಗಾಯಗಳಾಗಿವೆ.