ಮಾಲ್ದಾರೆಯಲ್ಲಿ ಅರಣ್ಯೀಕರಣ ಕಾರ್ಯಕ್ರಮ;ವನ್ಯಜೀವಿಗಳಿಗೆ ಆಹಾರ ಸಿಗುವ ಸಸ್ಯಗಳನ್ನು ಬೆಳೆಸಲು ಕರೆ

Sep 1, 2026 - 17:43
 0  118
ಮಾಲ್ದಾರೆಯಲ್ಲಿ ಅರಣ್ಯೀಕರಣ ಕಾರ್ಯಕ್ರಮ;ವನ್ಯಜೀವಿಗಳಿಗೆ ಆಹಾರ ಸಿಗುವ ಸಸ್ಯಗಳನ್ನು ಬೆಳೆಸಲು ಕರೆ

ಸಿದ್ದಾಪುರ :- ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುವ ಹಣ್ಣಿನ ಹಾಗೂ ವಿವಿಧ ತಳಿಯ ಸಸಿಗಳನ್ನು ನೆಡುವುದು ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಉಡುಪಿಿ ಯೋಜನೆಯ  ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಹೇಳಿದರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಲ್ದಾರೆ ಒಕ್ಕೂಟದ ವತಿಯಿಂದ ಅರಣ್ಯೀಕರಣ ಯೋಜನೆಯ ಅಂಗವಾಗಿ ಮಂಗಳವಾರ ಆಸ್ದಾನ ಹಾಡಿಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಗ್ರಾಮಗಳು ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವೆ ನಿರಂತರ ಸಂಘರ್ಷ ನಡೆಯುತ್ತಿದ್ದು ಜೀವಹಾನಿ ಹಾಗೂ ಆಸ್ತಿಪಾಸ್ತಿ ನಷ್ಟ ಸಂಭವಿಸುತ್ತಿದೆ ಈ ಸಂಘರ್ಷವನ್ನು ತಡೆಗಟ್ಟಲು ಅರಣ್ಯದಲ್ಲಿ ಒಂದೇ ರೀತಿಯ ಸಸಿಗಳನ್ನು ನೆಡುವ ಬದಲು, ವನ್ಯಜೀವಿಗಳಿಗೆ ಆಹಾರ ಮತ್ತು ಸೊಪ್ಪು ಒದಗಿಸುವ ಹಣ್ಣಿನ ಮರಗಳು ಸೇರಿದಂತೆ ವಿವಿಧ ತಳಿಯ ಸಸಿಗಳನ್ನು ಬೆಳೆಸಬೇಕು ಕಾಡಿನಲ್ಲೇ ಪ್ರಾಣಿಗಳಿಗೆ ಅಗತ್ಯವಾದ ಆಹಾರ ದೊರೆತರೆ ಅವು ನಾಡಿನತ್ತ ಬರುವ ಪ್ರಮಾಣ ಕಡಿಮೆಯಾಗಲಿದೆ. ಇದು ಮಾನವ ವನ್ಯಜೀವಿ ಸಂಘರ್ಷ ತಗ್ಗಿಸಲು ಸಹಕಾರಿಯಾಗಲಿದೆ ಎಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ ಎಂದರು.

 ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಂಸ್ಥೆಯು ಪ್ರತಿವರ್ಷ ಲಕ್ಷಾಂತರ ಸಸಿಗಳನ್ನು ನೆಡುವ ಕಾರ್ಯ ಮಾಡುತ್ತಿದೆ. ಕೊಡಗಿನ ಜನತೆ ಹಾಗೂ ಪರಿಸರ ಪ್ರೇಮಿಗಳು ಪರಿಸರವನ್ನು ಕಾಳಜಿಯಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದು, ಈ ಮಾದರಿಯ ಪರಿಸರ ಸಂರಕ್ಷಣಾ ಕಾರ್ಯ ರಾಜ್ಯಾದ್ಯಂತ ವಿಸ್ತರಿಸಬೇಕು ಪರಿಸರ ಜಾಗೃತಿ ಮನೆಮನೆಗೂ ತಲುಪಬೇಕು ಎಂದು ಹೇಳಿದರು.

 ಜನಪರ ಸಂಘಟನೆಯ ಭಾವ ಮಾಲ್ದಾರೆ ಮಾತನಾಡಿ, ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತಿದ್ದು, ಹಲವು ದೇಶಗಳು ದಿಢೀರ್ ಪ್ರವಾಹ ಹಾಗೂ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಿರುವುದನ್ನು ಕಾಣುತ್ತಿದ್ದೇವೆ ಇಂತಹ ವಿಪತ್ತುಗಳನ್ನು ಕಣ್ಣಾರೆ ಕಂಡಿದ್ದರೂ ಪರಿಸರ ಸಂರಕ್ಷಣೆಯತ್ತ ನಿರ್ಲಕ್ಷ್ಯ ವಹಿಸಿದರೆ ನಮಗೆ ನಾವೇ ಕಂಟಕ ತಂದುಕೊಂಡಂತೆ ಆಗುತ್ತದೆ ಎಂದರು ಡಿಜಿಟಲ್ ಯುಗದಲ್ಲಿ ಸಾಮಾಜಿಕ ಅರಣ್ಯೀಕರಣದ ಬಗ್ಗೆ ಗಮನ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಸಿ ನೆಡುವಂತಹ ಪವಿತ್ರ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಮಾಲ್ದಾರೆ ಬೀಟ್‌ನ ಅರಣ್ಯ ಇಲಾಖೆಯ ಸಿಬ್ಬಂದಿ ಚಂದ್ರಶೇಖರ್ ಮಾತನಾಡಿ ಮಾನವನ ಸ್ವಾರ್ಥದಿಂದ ಕಾಡು ನಾಶವಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವ ಪರಿಣಾಮ ವನ್ಯಜೀವಿಗಳಿಗೆ ಆವಾಸಸ್ಥಾನ ಹಾಗೂ ಆಹಾರದ ಕೊರತೆ ಉಂಟಾಗಿದೆ ಇದರಿಂದಾಗಿ ವನ್ಯಜೀವಿಗಳು ನಾಡಿನತ್ತ ಬಂದು ಮಾನವ ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ ಎಂದರು.

 ಸಂಘರ್ಷ ತಡೆಗಟ್ಟಲು ಅರಣ್ಯ ವೃದ್ಧಿ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಉತ್ತಮ ಹಾಗೂ ಶ್ಲಾಘನೀಯ ಹೆಜ್ಜೆಯಾಗಿದೆ ನೆಡಲಾಗಿರುವ ಸಸಿಗಳನ್ನು ಸಮರ್ಪಕವಾಗಿ ಪೋಷಿಸಿ ಬೆಳೆಸುವ ಮೂಲಕ ಅರಣ್ಯ ಸಂಪತ್ತನ್ನು ಸಮೃದ್ಧಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು ಕಾರ್ಯಕ್ರಮದಲ್ಲಿ ಪೇರಳೆ, ಬಿದಿರು, ಹಲಸು ಸೇರಿದಂತೆ ವನ್ಯಜೀವಿಗಳಿಗೆ ಹಣ್ಣು ಹಾಗೂ ಆಹಾರ ಒದಗಿಸುವ ವಿವಿಧ ತಳಿಯ ಸಸಿಗಳನ್ನು ಅರಣ್ಯ ಪ್ರದೇಶದಲ್ಲಿ ನೆಡಲಾಯಿತು.

ಮಾಲ್ದಾರೆಯ ಹಿರಿಯ ಕಾಫಿ ಬೆಳೆಗಾರ ಮಿಟ್ಟು ನಂಜಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಘು ಕರುಂಬಯ್ಯ, ಚಂಡೆ ಕಲಾವಿದ ಶಾಜಿ, ಮಾಜಿ ಯೋಧ ಅಜೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿಠಲ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಣ್ಣ, ಮಾಜಿ ಗ್ರಾಮ ಪಂ ಸದ್ಯಸೆ ಸರಸ್ವತಿ,ಕಾಫಿ ಬೆಳೆಗಾರ ಮುನ್ನ ಗಣಪತಿ, ಮಾಲ್ದಾರೆ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಈಶ್ವರಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ್, ಪ್ರಮೀಳಾ, ಮಾಲ್ದಾರೆ ಒಕ್ಕೂಟದ ಅಧ್ಯಕ್ಷ ಜೈಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ವೆಂಕಟೇಶ್. ಎಸ್ ಕೃಷಿ ಮೇಲ್ವಿಚಾರಕ ಅಶ್ವಥ್,ಯತೀಶ್, ರದೀಶ್, ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0