ಆರ್ಟ್ ಆಫ್ ಲಿವಿಂಗ್‌ನ ಪ್ರತಿಷ್ಠಿತ ‘ತೆರೆಮರೆಯ ಸಾಧಕ’ ಪ್ರಶಸ್ತಿ ಪಡೆದ "ಮಾಧ್ಯಮ ಸ್ಪಂದನ" ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ" ರಿಗೆ ಪ್ರತಿನಿಧಿ ಪತ್ರಿಕಾ ಬಳಗದ ವತಿಯಿಂದ ಸನ್ಮಾನ

Jun 23, 2026 - 21:07
 0  270
ಆರ್ಟ್ ಆಫ್ ಲಿವಿಂಗ್‌ನ ಪ್ರತಿಷ್ಠಿತ ‘ತೆರೆಮರೆಯ ಸಾಧಕ’ ಪ್ರಶಸ್ತಿ ಪಡೆದ "ಮಾಧ್ಯಮ ಸ್ಪಂದನ" ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ" ರಿಗೆ ಪ್ರತಿನಿಧಿ ಪತ್ರಿಕಾ ಬಳಗದ ವತಿಯಿಂದ ಸನ್ಮಾನ

ಮೈಸೂರು: "ಮಾಧ್ಯಮ ಸ್ಪಂದನ" ಮೂಲಕ ಸಮಾಜಮುಖಿ ಚಟುವಟಿಕೆ, ಮಾಧ್ಯಮ ಕ್ಷೇತ್ರದ ಮೂಲಕ ಜನಜಾಗೃತಿ ಮತ್ತು ಮಾನವೀಯ ಮೌಲ್ಯಗಳ ಪ್ರಸಾರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ, ಮಾಧ್ಯಮ ಸ್ಪಂದನ ಸಂಸ್ಥಾಪಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿಷ್ಠಿತ "ತೆರೆಮರೆಯ ಸಾಧಕ"ಪ್ರತಿನಿಧಿ ಪತ್ರಿಕೆಯ ಸ್ಥಾನಿಕ ಸಂಪಾದಕ ಶ್ರೀ."ಅಜ್ಜಮಾಡ ರಮೇಶ್ ಕುಟ್ಟಪ್ಪ" ಅವರನ್ನು ಮೈಸೂರಿನ ಕುವೆಂಪು ನಗರದ ಜಿಎಸ್ಎಸ್ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.

ಈ ಸಂದರ್ಭ ಜಿ.ಎಸ್.ಎಸ್. ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್, ಪ್ರತಿನಿಧಿ ಪತ್ರಿಕೆ ಪ್ರಧಾನ ಸಂಪಾದಕ ಸಿ .ಕೆ. ಮಹೇಂದ್ರ, ಸಂಪಾದಕ ಧರ್ಮಪುರ ನಾರಾಯಣ, ಸುದ್ದಿ ಸಂಪಾದಕ ಶೀ. ಮುಳ್ಳೂರು ರಾಜು, ಜಾಹೀರಾತು ವಿಭಾಗದ ಮಂಜುನಾಥ್ , ರಾಜೇಶ್ , ವಾಣಿಜ್ಯ ವಿಭಾಗದ ಮಂಜುನಾಥ್ ಬಾಬು, ವಿಶೇಷ ವರದಿಗಾರರಾದ ದಿನೇಶ್ ಚಂದ್ರಶೇಖರ್ , ರಂಗಸ್ವಾಮಿ ಮಾದಾಪುರ ಸೇರಿದಂತೆ ಪ್ರತಿನಿಧಿ ಪತ್ರಿಕಾ ಬಳಗದ ಎಲ್ಲಾ ಸದಸ್ಯರುಗಳು ಅಭಿನಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0