Kodagu

ಏಪ್ರಿಲ್ 10ರಿಂದ 12ರವರೆಗೆ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ

admincoorgdaily

ಏಪ್ರಿಲ್ 10ರಿಂದ 12ರವರೆಗೆ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಬೇಗೂರು ಗ್ರಾಮದ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಗ್ರಾಮದ ಜನರಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಕೇಚಟ್ಟಿರ ಅರುಣ್ ತಿಳಿಸಿದ್ದಾರೆ.

ಅಮೃತ ಮಹೋತ್ಸವವು ಏ.10,11,12 ದಿನದಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸುತ್ತಿದೆ. ಏ.10ರಂದು ಶುಕ್ರವಾರ ಗ್ರಾಮದಲ್ಲಿರುವ ಕುಟುಂಬಗಳ ನಡುವೆ 5 ಜನರ ಹಾಕಿ ಪಂದ್ಯಾವಳಿ ನಡೆಯುತ್ತದೆ. ಗ್ರಾಮದ ಪುರುಷ ಮತ್ತು ಮಹಿಳೆಯರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಸಾರ್ವಜನಿಕರಿಗೆ ಆಟೋಟಸ್ಪರ್ಧೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಏ.11ರಂದು ಪುರುಷ ಮತ್ತು ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಹಗ್ಗ-ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಎರಡು ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ರೂ.30,000 ನಗದು, ಆಕರ್ಷಕ ಟ್ರೋಫಿ ಆಕರ್ಷಕ ಟ್ರೋಫಿ, ದ್ವಿತೀಯಸ್ಥಾನ 20,000, ತೃತೀಯಸ್ಥಾನ ಪಡೆದ ತಂಡಕ್ಕೆ ರೂ.15,000 ನಗದು ಆಕರ್ಷಕ ಟ್ರೋಫಿ, ಚತುರ್ಥಸ್ಥಾನ ಪಡೆದ ತಂಡಕ್ಕೆ ಸಮಧಾನಕರ ಬಹುಮಾನವಾಗಿ ಟ್ರೋಪಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ರಾಜ ಸುಬ್ಬಯ್ಯ, ಕರುಂಬಯ್ಯ, ರಾಜ ಮುತ್ತಪ್ಪ, ಲಲಿತ, ಮತ್ರಂಡ ಮಿತ್ರ, ಇದ್ದರು.