Kodagu

ಭರವಸೆ ಈಡೇರಿಕೆ ಕೋರಿ ಅಂಗನವಾಡಿ ಮತ್ತು ಬಿಸಿಯೂಟ ನೌಕರರಿಂದ ಕರಾಳ ದಿನ ಆಚರಣೆ

admincoorgdaily

ಭರವಸೆ ಈಡೇರಿಕೆ ಕೋರಿ ಅಂಗನವಾಡಿ ಮತ್ತು ಬಿಸಿಯೂಟ ನೌಕರರಿಂದ  ಕರಾಳ ದಿನ ಆಚರಣೆ

ಮಡಿಕೇರಿ: ಚುನಾವಣಾ ಭರವಸೆ ಈಡೇರಿಕೆ ಕೋರಿ ಅಂಗನವಾಡಿ ಮತ್ತು ಬಿಸಿಯೂಟ ನೌಕರರು ಬುಧವಾರ ಕರಾಳ ದಿನ ಆಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರಿಗೆ ಮನವಿ ನೀಡಲಾಯಿತು.

 ಅಂಗನವಾಡಿ ಸಹಾಯಕಿಯರಿಗೆ 15 ಸಾವಿರ, ಕಾರ್ಯಕರ್ತೆಯರಿಗೆ 10 ಸಾವಿರ ರೂ. ಗೌರವಧನ ಜಾರಿ, ಎಲ್‌ಕೆಜಿ-ಯುಕೆಜಿ ವಿಸ್ತರಣೆ, 3 ವರ್ಷದೊಳಗಿನ ಮಕ್ಕಳಿಗೆ ಶಿಶುಪಾಲನಾ ಕೇಂದ್ರ ಆರಂಭ, ಎಸ್‌ಐಆರ್ ಕೆಲಸದಿಂದ ಮುಕ್ತಿ ಪ್ರಮುಖ ಬೇಡಿಕೆಗಳಾಗಿವೆ. ಬಿಸಿಯೂಟ ನೌಕರರು 7 ಸಾವಿರ ರೂ. ವೇತನ, ಕೆಲಸದ ಭದ್ರತೆ, 10 ಸಾವಿರ ಪಿಂಚಣಿ, ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯಡಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಇಸ್ಕಾನ್‌ಗೆ ಯೋಜನೆ ನೀಡುವ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು. 25 ವರ್ಷದಿಂದ ನಡೆಯುತ್ತಿರುವ ಯೋಜನೆಗೆ ಬೆಲೆಯೇರಿಕೆಗೆ ತಕ್ಕಂತೆ ಅನುದಾನ ನೀಡದೆ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿದರು. ಶಾಲಾ ಸ್ವಚ್ಛತಾ ಕೆಲಸವನ್ನು ಬಿಸಿಯೂಟ ನೌಕರರಿಗೆ ನೀಡಿ ಶಾಲಾ ಸಿಬ್ಬಂದಿಯನ್ನಾಗಿ ಪರಿಗಣಿಸಬೇಕು ಎಂದರು. ಜಿಲ್ಲಾಧ್ಯಕ್ಷೆ ವಿ.ಎಸ್.ಸುಮಿತ್ರ, ಕಸುಮ ಎಚ್.ಸಿ. ಸೇರಿದಂತೆ ನೂರಾರು ನೌಕರರು ಪಾಲ್ಗೊಂಡರು.