Kodagu

ಸೋಮವಾರಪೇಟೆ ತಾಲ್ಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿಯ ವಾರ್ಷಿಕ ಮಹಾಸಭೆ

admincoorgdaily

ಸೋಮವಾರಪೇಟೆ ತಾಲ್ಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿಯ ವಾರ್ಷಿಕ ಮಹಾಸಭೆ

ಸೋಮವಾರಪೇಟೆ: ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಭಾನುವಾರ ಸೋಮವಾರಪೇಟೆ ಅಲೋಕ ಪ್ಯಾಮಿಲಿ ಹಾಲ್ ನಲ್ಲಿ ಸಮಿತಿ ಅಧ್ಯಕ್ಷ ಬಿ. ಆರ್ ಚಂದ್ರಹಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ನಿವೇಶನವಿದ್ದು ಅನೇಕ ವರ್ಷಗಳಿಂದ ಕಟ್ಟದ ಕಟ್ಟುವ ಬಗ್ಗೆ ಯೋಜನೆ ರೂಪಿಸುತ್ತಿದ್ದು ಇನ್ನು ಇದು ಕಾರ್ಯಗತವಾಗಿಲ್ಲ ಎಂದು ಸದಸ್ಯರು ಅಸಮಾಧಾನ 

ವ್ಯಕ್ತಪಡಿಸಿದರು. ಹಾಗೂ ಕುಲಬಾಂಧವರನ್ನು ಎಲ್ಲರನ್ನೂ ಜೊತೆಗೆ ಕರೆತರುವ ಕೆಲಸ ಆಗಬೇಕು ಎಂದರು.

ಮುಂದಿನ ದಿನದಲ್ಲಿ ನಮ್ಮ ನಿವೇಶನದಲ್ಲಿ ಕಟ್ಟಡ ಕಟ್ಟಲು ಕಟ್ಟಡ ನಿರ್ಮಾಣ ಸಮಿತಿ ರಚನೆ ಮಾಡಿ ಕಾರ್ಯಗತವಾಗುವ ಬಗ್ಗೆ ಗೌರವ ಸಲಹೆಗಾರ ಬಿ. ಎ.ಭಾಸ್ಕರ್ ತಿಳಿಸಿದರು.

ವಯುಕ್ತಿಕವಾಗಿ ಯಾವುದೇ ಅಸಮಾಧಾನ ಇದ್ದರು ಅದನ್ನು ಬಿಟ್ಟು ನಮ್ಮ ಸಂಘಟನೆ ಬೆಳೆಯಲು ಎಲ್ಲರೂ ಒಂದಾಗಬೇಕು ಎಂದು ಅಧ್ಯಕ್ಷ ಚಂದ್ರಹಾಸ್ ಹೇಳಿದರು.

ಇದೆ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಅನೀಶ್ ರವರನ್ನು ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಗೌರವ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಉಪಾಧ್ಯಕ್ಷ ಸುಂದರ್, ಖಜಾಂಚಿ ರಮೇಶ್, ಪ್ರಧಾನ ಕಾರ್ಯದರ್ಶಿ ಇಂದಿರಾ ಮೊಣಪ್ಪ.ದಾನಿ ಪದ್ಮನಾಭ ಕಿರಗಂದೂರ್, ಕಾರ್ತಿಕ್ ಸದಾನಂದ, ಸಂಘದ ನಿರ್ದೇಶಕರು ಹಾಗೂ ಸದಸ್ಯರು ಮುಂತಾದವರಿದ್ದರು.

ಯಶೋಧ ಚಂದ್ರಶೇಖರ್ ಪ್ರಾರ್ಥನೆ ಮಾಡಿ ಪ್ರಧಾನ ಕಾರ್ಯದರ್ಶಿ ಇಂದಿರಾ ಮೊಣಪ್ಪ ಸ್ವಾಗತಿಸಿ, ಖಜಾಂಚಿ ರಮೇಶ್ ಲೆಕ್ಕಪತ್ರ ಮಂಡಿಸಿ ಗೌರವ ಸಲಹೆಗಾರ ಭಾಸ್ಕರ್ ವಂದಿಸಿದರು.

ಸದಸ್ಯರು ಸಂಘ ಬೆಳೆಯಲು ಸಲಹೆ ಸೂಚನೆ ನೀಡಿದರು.