ಕೊಂಡಂಗೇರಿ: ಅಸ್ಸಾಂ ಮೂಲದ ಕಾರ್ಮಿಕ ಆತ್ಮಹತ್ಯೆ

Feb 6, 2026 - 11:00
Feb 6, 2026 - 11:19
 0  1.6k
ಕೊಂಡಂಗೇರಿ: ಅಸ್ಸಾಂ ಮೂಲದ ಕಾರ್ಮಿಕ ಆತ್ಮಹತ್ಯೆ

ಸಿದ್ದಾಪುರ, ಫೆ. 5: ಅಸ್ಸಾಂ ಮೂಲದ ಕಾರ್ಮಿಕನೋರ್ವ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಲುಗುಂದ ಗ್ರಾಮದ ಕೊಂಡಂಗೇರಿಯಲ್ಲಿ ಸಂಭವಿಸಿದೆ.

 ಕೊಂಡಂಗೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಕಾರ್ಮಿಕ ಅಬ್ದುಲ್ ಕಲಾಂ ಆಜಾದ್ (40) ಎಂಬಾತ ಆನ್‌ಲೈನ್ ಆಟದಿಂದ ಹಣ ಕಳೆದುಕೊಂಡು ಸಾಲದಿಂದಾಗಿ ಈತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 8
Wow Wow 0