ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಅವರ ಪುತ್ರರರ ವಿರುದ್ಧ ಕೊಲೆ ಯತ್ನ ಆರೋಪ: ಎಸ್.ಪಿ ಗೆ ದೂರು ನೀಡಲು ನಿರ್ಧಾರ:ಕೆ.ಎ ಷರೀಫ್

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಅವರ ಪುತ್ರರರ ವಿರುದ್ಧ ಕೊಲೆ ಯತ್ನ ಆರೋಪ:   ಎಸ್.ಪಿ ಗೆ ದೂರು ನೀಡಲು ನಿರ್ಧಾರ:ಕೆ.ಎ ಷರೀಫ್

ಮಡಿಕೇರಿ: ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಪುತ್ರರು ಕೊಲೆಗೆ ಯತ್ನಿಸಿದ್ದಲ್ಲದೇ ಪೊಲೀಸ್ ಇಲಾಖೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಹಲ್ಲೆಗೊಳಗಾದ ಕೆ.ಎ.ಷರೀಫ್, ಈ ಸಂಬಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗವುದು ಎಂದು ತಿಳಿಸಿದರು.

ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೨೩ರಂದು ಬೇತು ಗ್ರಾಮದ ನಿವಾಸಿ ಹಮೀದ್ ಅವರೊಂದಿಗೆ ಕಾರಿನಲ್ಲಿ ತೆರಳಲು ನಾಪೋಕ್ಲುವಿಗೆ ಬರುವ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಪುತ್ರರು ಕಾರಿನಲ್ಲಿ ಆಗಮಿಸಿ ಹಳೆ ದ್ವೇಷದಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಗೆ ಒಳಗಾದ ಹಮೀದ್ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದು ಹಿಂತಿರುಗಿ ತಾನು ದ್ವಿಚಕ್ರ ವಾಹನದಲ್ಲಿ ಅಕ್ಕಿತೆಗೆದುಕೊಂಡು ಮಗಳನ್ನು ಕರೆದೊಯ್ಯಲು ಬರುತ್ತಿದ್ದ ಸಂದರ್ಭ ಸ್ಕೂಟಿಗೆ ಡಿಕ್ಕಿ ಪಡಿಸಿದ್ದಾರೆ.

 ಸ್ಥಳಕ್ಕೆ ಆಗಮಿಸಿದ ಇವರು ಮತ್ತೆ ನನ್ನ ಮೇಲೆ ಮಾರಾಣಾಂತಿವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು ತಡೆಯಲು ಬಂದ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಚೀರಿಕೊಂಡ ಪರಿಣಾಮ ಸ್ಥಳದಿಂದ ಪರಾರಿಯಾಗಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ನ್ಯಾಯಕ್ಕೆ ಒತ್ತಾಯಿಸಲಾಗುವುದು ಎಂದರು. ಈ ಘಟನೆಗಳಿಂದ ನಿರಂತರ ಕಿರುಕುಳವಾಗುತ್ತಿದ್ದು, ಪದೇ ಪದೇ ಠಾಣೆ ಮೆಟ್ಟಿಲು ಹೇರುವಂತಾಗಿದೆ. ವಿದ್ಯಾಭ್ಯಾಸ ಮಾಡುತ್ತಿರುವ ಹೆಣ್ಣು ಮಗುವನ್ನು ಪದೇ ಪದೇ ಠಾಣೆಗೆ ಸಾಕ್ಷಿ ಹೇಳಲು ಬರುಲು ಹೇಳುತ್ತಿದ್ದಾರೆ.

ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಇಂದು ಉಳ್ಳವರ ಪರವಾಗಿದೆ. ಪ್ರಕರಣವನ್ನೇ ತಿರುಚಿ ನಮ್ಮ ವಿರುದ್ಧವೇ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆ.ಎ.ಷರೀಫ್ ಅವರ ಪತ್ನಿ ಹಸೀನಾ ಮಾತನಾಡಿ, ನನ್ನ ಪತಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ಅವರು ರಾಜಾರೋಷವಾಗಿ ಶಾಸಕರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಬಡವರ ಪರವಿರುವ ಶಾಸಕರು ಆತನನ್ನು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಎ.ಷರೀಫ್ ಅವರ ಪುತ್ರಿ ಶಾಮೀಲಾ ಇದ್ದರು.