ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ಭಾಗವಹಿಸಿ: ಮಹೇಶ್ ಗಣಪತಿ ಕರೆ | ಯೂನಿಕ್ ಬಾಯ್ಸ್‌ ಕೊಡಗು ಅಂಡರ್ 18 ಬಾಲಕರ ಕಬಡ್ಡಿ ಪಂದ್ಯಾಟ

ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ಭಾಗವಹಿಸಿ: ಮಹೇಶ್ ಗಣಪತಿ ಕರೆ |    ಯೂನಿಕ್ ಬಾಯ್ಸ್‌ ಕೊಡಗು ಅಂಡರ್ 18  ಬಾಲಕರ ಕಬಡ್ಡಿ ಪಂದ್ಯಾಟ

ವಿರಾಜಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿರುವ ದೇಶೀಯ ಕ್ರೀಡೆಗಳಿಗೆ ಸಹಕರಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಅಭಿಮತ ವ್ಯಕ್ತಪಡಿಸಿದರು.

ಯೂನಿಕ್ ಬಾಯ್ಸ್ ವಿರಾಜಪೇಟೆ ತೋರ ಇವರ ಆಶ್ರಯದಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 18 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾವಳಿಯನ್ನು ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿತ್ತು.

 ಮೈದಾನವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಹೇಶ್ ಗಣಪತಿ ಅವರು, ಯುವ ಸಮುದಾಯವು ಮೊಬೈಲ್ ಮತ್ತು ದುಶ್ಚಟಗಳಿಗೆ ದಾಸರಾಗಿ ತಮ್ಮ ಆರೋಗ್ಯವನ್ನು ಹಂತ ಹಂತವಾಗಿ ಕಳೆದುಕೊಳ್ಳುವ ಭೀತಿ ಎದುರಿಸುತಿದ್ದಾರೆ.

ದೇಹ ಮತ್ತು ಮನಸ್ಸುಗಳನ್ನು ಸಮತೋಲನದಲ್ಲಿಡಲು ಕ್ರೀಡೆಯು ಸಹಕಾರಿ. ಯುವಕ ಸಂಘಗಳು ಪಂದ್ಯಾಟಗಳನ್ನು ನಡೆಸುವ ರೀತಿ ಸಮಾನವಾಗಿ, ಕ್ರೀಡಾ ವೇದಿಕೆ ನಿರ್ಮಾಣ ಮಾಡಲು ಹೊಸ ಪ್ರಯೋಗದಂತೆ ಪ್ರಥಮವಾಗಿ ಪಂದ್ಯಾಟವನ್ನು ಅಯೋಜಿಸಿರುವುದು ಕ್ರೀಡಾ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡು ಗ್ರಾಮೀಣಾ ಭಾಗದ ಸೊಗಡನ್ನು ಜೀವಂತವಾಗಿಸಿ. ಎಂದು ಹೇಳಿದರು.

 ವಕೀಲರು ಮತ್ತು ಭಾ.ಜ.ಪ ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್ ಅವರು ಕ್ರೀಡಾ ಮೈದಾನಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಂದ ಅನೇಕ ಮಂದಿ ಉತ್ತಮ ಸಾಧಕರಾಗಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಕ್ರೀಡೆಗಳು ಶಾರೀರಿಖವಾಗಿಯು ಮಾನಸಿಕವಾಗಿಯು, ಮನುಜನ ಮೇಲೆ ಪ್ರಭಾವ ಬೀರುತ್ತದೆ.ಬಾಲ್ಯದಿಂದಲೇ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡಲ್ಲಿ ಮಾತ್ರ ಉತ್ತಮ ವ್ಯಕ್ತಿತ್ವ ಧಕ್ಕಿಸಿಕೊಳ್ಳಬಹುದು.

ದೇಶೀಯ ಕ್ರೀಡೆಗಳು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಂಸ್ಕೃತಿಯೊಂದಿಗೆ ಸುಸಂಸ್ಕೃತ ರಾಷ್ಟ್ರ ನಿರ್ಮಾಣ ಕ್ಕೆ ಯುವ ಜನತೆಯ ಮುಂದಾಗುವಂತೆ ಬಾಲಕರಿಗೆ ಕರೆ ನೀಡಿದರು. ಕ್ರೀಡಾ ಸಮಾರಂಭದಲ್ಲಿ ಅಯೋಜಕ ಸಂಸ್ಥೆಯ ಅಧ್ಯಕ್ಷರಾದ ಶರಣ್ ಕೆ.ಯು ಅವರು ಅಧ್ಯಕ್ಷತೆ ವಹಿಸಿದ್ದರು. ಕೆದಮುಳ್ಳೂರು ಗ್ರಾಮ ಪಂಚಾಯತಿ ಸದಸ್ಯರಾದ ಕೆ. ರಾಮಯ್ಯ,ಮಾಜಿ ಸದಸ್ಯರಾದ ಗೌಡುದಾರೆ ಚೋಟು ಬಿದ್ದಪ್ಪ, ಗ್ರಾಮ ಪಂಚಾಯತಿ ಪಿ.ಡಿ.ಓ. ಬಿ. ಮಣಿ ,ಕುಶಾಲಪ್ಪ ಅಯೋಜಕರಾದ ಶರಣ್ ಕೆ.ಯು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ