ಗುಡ್ಡೆಹೊಸೂರಿನಲ್ಲಿ ಅರಣ್ಯ ಸಚಿವರಿಗೆ ಬಿಜೆಪಿಯಿಂದ ಮುತ್ತಿಗೆ ಯತ್ನ

May 6, 2026 - 12:30
 0  1.2k
ಗುಡ್ಡೆಹೊಸೂರಿನಲ್ಲಿ ಅರಣ್ಯ ಸಚಿವರಿಗೆ ಬಿಜೆಪಿಯಿಂದ ಮುತ್ತಿಗೆ ಯತ್ನ

ಕುಶಾಲನಗರ, ಮೇ 06: ಬಿಜೆಪಿ ಕಾರ್ಯಕರ್ತರಿಂದ ಅರಣ್ಯ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆಗೆ ಪ್ರಯತ್ನಸಿರುವ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ. ದುಬಾರೆಗೆ ಆಗಮಿಸುತ್ತಿದ್ದ ಅರಣ್ಯ ಸಚಿವ ಈಶ್ಚರ ಖಂಡ್ರೆಗೆ ಅವರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಗೆ ಮುಂದಾಗಿದ್ದಾರೆ. ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಗುಡ್ಡೆಹೊಸೂರಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಆನೆ ಮಾನವ ಸಂಘರ್ಷ ತಡೆಗಟ್ಟುವಲ್ಲಿ ವಿಫಲ, ಸಿ ಅಂಡ್‌ ಡಿ ಲ್ಯಾಂಡ್ ಸಮಸ್ಯೆ ಖಂಡಿಸಿ ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆ ಸಚಿವರ ವಾಹನ ತಡೆದು ಆಕ್ರೋಶಕ್ಕೆ ಸಿದ್ಧತೆ ನಡೆಸಿದ್ದ ಪ್ರತಿಭಟನಾಕಾರರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 1
Angry Angry 1
Sad Sad 0
Wow Wow 0