Kodagu

SIR ವೇಳೆ ಸರ್ಕಾರದ ಪಿಆರ್‌ಸಿ ಸುತ್ತೋಲೆ ಬಿಜೆಪಿ ಆಕ್ರೋಶ

admincoorgdaily

SIR ವೇಳೆ ಸರ್ಕಾರದ ಪಿಆರ್‌ಸಿ ಸುತ್ತೋಲೆ ಬಿಜೆಪಿ ಆಕ್ರೋಶ

ಮಡಿಕೇರಿ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ಪಿಆರ್‌ಸಿ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ವಿರೋಧಿಸಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

 ವಿರಾಜಪೇಟೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಎಸ್‌ಐಆರ್ ಸಂಪೂರ್ಣವಾಗಿ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತದೆ. ಈ ಸಮಯದಲ್ಲಿ ಸರ್ಕಾರ ಸುತ್ತೋಲೆ ಹೊರಡಿಸುವುದು ಸೂಕ್ತವಲ್ಲ. ತಹಶೀಲ್ದಾರ್‌ಗೆ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವ ಅಧಿಕಾರವಿಲ್ಲ.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಚುನಾವಣಾ ಆಯೋಗ ಗಮನ ಹರಿಸಬೇಕು ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಅರ್ಹತೆಯಿಲ್ಲದವರಿಗೆ ಪಿಆರ್‌ಸಿ ನೀಡಿದರೆ ಅವರು ಕೇಂದ್ರ-ರಾಜ್ಯ ಸೌಲಭ್ಯ ಪಡೆಯುತ್ತಾರೆ. ಇದು ನಿಜವಾದ ಬಡವರಿಗೆ ಮತ್ತು ಒಕ್ಕೂಟ ವ್ಯವಸ್ಥೆಗೆ ಹೊಡೆತ. ಸರ್ಕಾರ ತಕ್ಷಣ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮನು ಮಂಜುನಾಥ್, ಸಜಿಲ್ ಕೃಷ್ಣನ್ , ಮಹೇಶ್ ಜೈನಿ, ಅರುಣ್ ಕುಮಾರ್ ಇದ್ದರು.