ಬಿಜೆಪಿ ಪ್ರತಿಭಟನೆ ಶತಮಾನದ ದೊಡ್ಡ ಜೋಕ್: ಕೊಡಗು ಕಾಂಗ್ರೆಸ್ ಟೀಕೆ
ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಮುಖಂಡರು ಜಿಲ್ಲೆಯ ಕೆಲವು ಕಡೆ ರಸ್ತೆ ಮುಂದೆ ಪ್ರತಿಭಟನೆ ನಡೆಸಿರುವುದು ಈ ಶತಮಾನದ ದೊಡ್ಡ ಜೋಕ್ ಆಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಟೀಕಿಸಿದ್ದಾರೆ.
ಮಳೆಗಾಲ ಇನ್ನೂ ಮುಗಿದಿಲ್ಲ.ವಾಡಿಕೆ ಮಳೆಗಿಂತ ಹೆಚ್ಚಿನ ಮಳೆ ಈ ಬಾರಿ ಸುರಿದಿದ್ದು ಮಳೆಯ ಅಬ್ಬರ ಮುಂದುವರಿಯುತ್ತಿದೆ. ಈಗಾಗಲೇ ನೂರಾರು ಕೋಟಿ ರೂಗಳ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಸ್ತೆ ಕಾಮಗಾರಿಗೆ ಸಂಭಂದಿಸಿದಂತೆ ಟೆಂಡರ್ ಪ್ರಕ್ರಿಯೆ ಗಳು ಮುಗಿದಿದ್ದು ಕಾಮಗಾರಿಗೆ ಕ್ಷಣಗಣನೆ ಆರಂಭಗೊಂಡಿದೆ.ಮಳೆ ನಿಂತ ತಕ್ಷಣವೇ ಕೆಲಸ ಪ್ರಾರಂಭವಾಗುವ ವಿಚಾರ ಎಲ್ಲರಿಗೂ ತಿಳಿದಿದೆ.
ಆದರೂ ಬಿಜೆಪಿ ಯವರು ತಮ್ಮ ಅಸ್ತಿತ್ವವನ್ನು ತೋರ್ಪಡಿಸುವ ಸಲುವಾಗಿ ರಸ್ತೆಯ ಮುಂದೆ ನಿಂತು ಪ್ರತಿಭಟನೆ ನಡೆಸಿದ್ದಾರೆ.ಕಳೆದ ಇಪ್ಪತ್ತು ವರ್ಷಗಳಿಂದ ಡಾಂಬರು ಕಾಣದ ರಸ್ತೆಗಳು ಈಗ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ಕಾಳಜಿಯಿಂದ ಸುಸ್ಥಿಗೆ ಬರುತ್ತಿದೆ.ಇದರ ಅರಿವು ಇದ್ದರೂ ಬಿಜೆಪಿ ಯವರು ಪ್ರತಿಭಟನೆ ಪ್ರಹಸನ ನಡೆಸಿರುವುದ ಶತಮಾನದ ದೊಡ್ಡ ಜೋಕ್ ಆಗಿದೆ ಎಂದು ತೆನ್ನಿರ ಮೈನಾ ಪತ್ರಿಕಾ ಪ್ರಕಟನೆಯಲ್ಲಿ ಟೀಕಿಸಿದ್ದಾರೆ. ಕಾರ್ಕಳದ ಬಿಜೆಪಿ ಶಾಸಕ,ಮಾಜಿ ಸಚಿವ ಸುನಿಲ್ ಕುಮಾರ್ ರವರು ಈ ಬಾರಿ ನಡೆದ ಸದನದ ಕಲಾಪದಲ್ಲಿ ಕೊಡಗು ಜಿಲ್ಲೆಗೆ ನೀಡಿದ ಹಾಗೆ ನಮಗೂ ಅನುದಾನ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದನ್ನು ಗಮನಿಸಿದರೆ ಗೊತ್ತಾಗುತ್ತದೆ.
ಕೊಡಗು ಜಿಲ್ಲೆಗೆ ವಿಶೇಷ ಆದ್ಯತೆ ನೀಡಿದೆ ಎಂದು. ಮೊನ್ನೆ ತಾನೆ ಮಡಿಕೇರಿಯಲ್ಲಿ ಬಿಜೆಪಿಗರು ನಡೆಸಿದ ಮಾಧ್ಯಮ ಗೋಷ್ಠಿ ಯಲ್ಲ ಬಿಜೆಪಿ ಜನಪ್ರತಿನಿಧಿಯೊಬ್ಬರು ಕೊಡಗಿನ ಈಗಿನ ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ಅಲ್ಲದೆ ಬಿಜೆಪಿಯ ನೂರಾರು ಮುಖಂಡರು ಅರ್ಜಿ ಹಿಡಿದು ಎ.ಎಸ್.ಪೊನ್ನಣ್ಣ ನವರ ವಿರಾಜಪೇಟೆಯ ಗೃಹ ಕಛೇರಿ ಮತ್ತು ಡಾ ಮಂತರ್ ಗೌಡರವರ ಸೋಮವಾರಪೇಟೆಯ ಗೃಹ ಕಛೇರಿಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಿರುತ್ತಾರೆ.
ವಸ್ತುಸ್ಥಿತಿ ಹೀಗಿರುವಾಗ ಕೊಡಗು ಬಿಜೆಪಿ ರಸ್ತೆ ತಡೆ ನಡೆಸುವ ಅಗತ್ಯತೆ ಇದೆಯೇ ಎಂದು ತೆನ್ನಿರ ಮೈನಾ ಪ್ರಶ್ನಿಸಿದ್ದಾರೆ. ಮಾಜಿ ಶಾಸಕರು ಅಧಿಕಾರದಲ್ಲಿ ಇದ್ದಾಗ 2018 ರಿಂದ 2021 ರ ವರೆಗೆ ಮಡಿಕೇರಿ ನಗರ ಖಾಸಗಿ ಬಸ್ ನಿಲ್ದಾಣದಲ್ಲಿ ನಾಲ್ಕೈದು ಲಕ್ಷ ರೂಗಳ ಅನುದಾನ ನೀಡಿ ಬಸ್ ತಂಗುದಾಣ ನಿರ್ಮಿಸಲು ಸಾಧ್ಯವಾಗದೆ ದಾನಿಗಳಿಂದ ನಿರ್ಮಿಸಿದ ತಂಗುದಾಣವನ್ನು ಉದ್ಘಾಟನೆ ಮಾಡಿ ಫೋಸ್ ಕೊಟ್ಟಿದ್ದರು ಎಂದು ಬಿಜಿಪಿಗರನ್ನು ತೆನ್ನಿರ ಮೈನಾ ಟೀಕಿಸಿದ್ದಾರೆ.