ಮಾಯುಮುಡಿಯಲ್ಲಿ‌ ಬಾನಂಡ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

May 1, 2026 - 11:52
 0  327
ಮಾಯುಮುಡಿಯಲ್ಲಿ‌ ಬಾನಂಡ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಪೊನ್ನಂಪೇಟೆ; ಮಾಯಮುಡಿಯಲ್ಲಿ ನಡೆಯುತ್ತಿರುವ, ಅಖಿಲ ಅಮ್ಮ ಕೊಡವ ಸಮಾಜ ಹಾಗೂ ಬಾನಂಡ ಕಪ್ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ದೀಪ ಬೆಳಗಿಸುವುದರ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಟಾಟು ಮೊಣಪ್ಪ, ನ್ಯಾಯಾಧೀಶರಾದ ಶಿಲ್ಪ, ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು, ಉಪಾಧ್ಯಕ್ಷರು ಉಮೇಶ್ ಕೆಚಮಯ್ಯ, ಕುಟುಂಬದ ಅಧ್ಯಕ್ಷರು ರಮೇಶ್, ಟಿಪ್ಪು ಬಿದ್ದಪ್ಪ, ಹಾಗೂ ಬಾನಂಡ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 1