Kodagu

ಶನಿವಾರಸಂತೆ;ಭಾರತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

admincoorgdaily

ಶನಿವಾರಸಂತೆ;ಭಾರತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

ಶನಿವಾರಸಂತೆ : ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜು ಎನ್ ಎಸ್ ಎಸ್ ಘಟಕದ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ಶಿಬಿರದಲ್ಲಿ ಶಾಲಾ ಮೈದಾನವನ್ನು ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕೇಶವಮೂರ್ತಿ, ಖಜಾಂಚಿ ಬಿ ಕೆ ಚಿಣ್ಣಪ್ಪ, ಉಪಾಧ್ಯಕ್ಷ ಧರ್ಮಪ್ಪ, ನಿಕಟಪೂರ್ವ ಅಧ್ಯಕ್ಷ ಬಿ ಸಿ ಧರ್ಮಪ್ಪ, ಸದಸ್ಯರಾದ ಶಿವಕುಮಾರ್, ಅಶೋಕ್ ಎಸ್ ಜೆ, ಸುಹಾನ್ ಸಿ ಎಂ, ಶಿಬಿರಾಧಿಕಾರಿ ಹರೀಶ್ ಮಾಗಲು, ಪೊನ್ನಪ್ಪ ಬಿ ಎಂ ಹಾಗೂ ಶಿಬಿರಾರ್ಥಿಗಳು ಇದ್ದರು.