ಪೊನ್ನಂಪೇಟೆ-ಕಾನೂರು-ನಿಟ್ಟೂರು ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಪೊನ್ನಂಪೇಟೆ: ತಾಲೂಕಿನಲ್ಲಿ ಹಾದು ಹೋಗುವ ಪೊನ್ನಂಪೇಟೆ-ಕಾನೂರು-ನಿಟ್ಟೂರು ರಸ್ತೆ ನಿರ್ಮಾಣ ಕಾಮಗಾರಿಗೆ, ಭೂಮಿ ಪೂಜೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ನೆರವೇರಿಸಿದರು. ಈ ರಸ್ತೆಯ ಅಭಿವೃದ್ಧಿಗೆ ಮಾನ್ಯ ಶಾಸಕರು ರಾಜ್ಯ ಸರ್ಕಾರದಿಂದ ₹ 5.30 ಕೋಟಿ ಅನುದಾನವನ್ನು ಒದಗಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾಗಿದ್ದ ಈ ರಸ್ತೆಯ ಮರು ನಿರ್ಮಾಣಕ್ಕೆ ಮಾನ್ಯ ಶಾಸಕರು ಅನುದಾನ ಒದಗಿಸಿದ್ದು ಈಗ ಮಳೆ ನಿಂತ ಬಳಿಕ ಈ ಕಾಮಗಾರಿಗೆ ಚಾಲನೆ ದೊರಕಿದೆ. ಈ ಕಾಮಗಾರಿಯನ್ನು ಅತ್ಯಂತ ಶೀಘ್ರದಲ್ಲಿ ಗುಣಮಟ್ಟ ಕಾಯ್ದುಕೊಂಡು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಮಾನ್ಯ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರು ರಮೇಶ್, ಪಂಚಾಯಿತಿ ಸದಸ್ಯರು ಬೋಪಣ್ಣ, ದಾನಿಗಳು ಜೀವನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪ್ರತ್ಯು, ಹಿರಿಯರು ಪೆಮ್ಮಂಡ ಪೊನ್ನಪ್ಪ, ಪಕ್ಷದ ಮುಖಂಡರು ಮುಕಟೀರ ಸಂದೀಪ್, ವಿನು ಉತ್ತಪ್ಪ, ಮನು, ಸಿದ್ದು ನಾಚಪ್ಪ, ನಿಖಿಲ್ ಸೋಮಣ್ಣ, ಅಜ್ಜಿಕುಟ್ಟಿರ ಪೊನ್ನು, ಪಮು, ಅಣ್ಣಳ್ಳಮಾಡ ಹರೀಶ್, ಅಂಟೋನಿ, ಚೆಕೇರ ಸುಧೀರ್, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.