ಬಿಲ್ಲವ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ವಿದ್ಯುಕ್ತ ತೆರೆ
ವಿರಾಜಪೇಟೆ:ಸಮಾಜಗಳ ಏಳಿಗೆಯು ಸಮಾನತೆ ಮತ್ತು ಅಸ್ತಿತ್ವದ ಅಡಿಸ್ಥಾನದಲ್ಲಿ ನೆಲೆ ನಿಂತಿದೆ ಎಂದು ಸೋಲೂರು ಮಠದ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಂದಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿಅಧ್ಯಕ್ಷರಾದವ ಸೇವಾ ಸಂಘ ವಿರಾಜಪೇಟೆ ಕೊಡಗು ಜಿಲ್ಲೆ ವತಿಯಿಂದ ವಿರಾಜಪೇಟೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 20 ನೇ ವರ್ಷ ವಾರ್ಷಿಕ ಕ್ರೀಡಾ ಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನೆಲ,ಜಲದ ಮಹತ್ವದೊಂದಿಗೆ ಸಾಂಪ್ರದಾಯ ಮೂಲವನ್ನು ಮರೆತು ಜೀವನ ಇಲ್ಲ.ಆಧುನಿಕತೆಯ ಭರದಲ್ಲಿ ಸಂಸ್ಕೃತಿ ಸಮುದಾಯದ ಅಂತಗರ್ಭ ಮೂಲ ಆಚಾರಗಳನ್ನು ಮರೆತು ಜೀವನ ಸಾಗಿದಲ್ಲಿ ಮೂಲ ಸಮುದಾಯವನ್ನು ಮರೆತಂತೆ. ಸಮಾನತೆಯ ಸಾರವನ್ನು ಜಗತ್ತಿಗೆ ಪ್ರಚಾರ ಪಡಿಸಿದ ದೇವ ಗುರು ನಾರಾಯಣ ಗುರುಗಳ ತತ್ವ ಸಿದ್ದಾಂತಗಳ ಮೇಲೆ ಸಂಘಟನೆ ಸಾಗಿದೆ. ಸಮೂದಾಯವು ಸಾಗಬೇಕಾಗಿರುವ ಅನಿವಾರ್ಯ ಇದೆ. ಸಮುದಾಯ ಬಾಂಧವರು ಸಂಘಟನೆ ಮತ್ತು ತತ್ವಗಳ ಅನುಯಾಯಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ತಮ್ಮ ಆರ್ಶಿವಚನದಲ್ಲಿ ಹೇಳಿದರು.
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿ ಮಾತನಾಡಿ, ಜನಾಂಗದ ಬಾಂಧವರನ್ನು ಒಂದೆಡೆ ಸೇರಿಸುವಂತೆ ಮಾಡುವ ಶಕ್ತಿ ಕ್ರೀಡಾಸಂಗಮಕ್ಕಿದೆ. ಇದರ ಸದುಪಯೋಗಪಡಿಸಿಕೊಂಡು ಕುಟುಂಬದ ಸದಸ್ಯರೊಂದಿಗೆ ಬೆರೆತು ಅಜನ್ಮ ಹೊಂದಾಣಿಕೆಯ ಜೀವನ ಸಾಗಿಸಿ.ಒಂದಾಗಿ ಒಗ್ಗೂಡಿಸಿ ಸಂಘಟನೆ ಬಲಪಡಿಸಿ ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಕಾಣುವಂತಾಗಬೇಕು. ಇದು ಜೀವನದ ಶೈಲಿಗೆ ಪೂರಕವಾಗಿದೆ ಎಂದು ಹೇಳಿದರು. ಇದೆ ಸಂದರ್ಭ ಬಿಲ್ಲವ ಸಮುದಾಯದ ಮನವಿ ಮೇರೆಗೆ ಬಿಲ್ಲವ ಭವನಕ್ಕೆ ಹೆಚ್ಚಿನ ಅನುದಾನದ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ, ಕೊಡವ ಜನಾಂಗ ಸಂಘಟಿತರಾಗಲು ಕೌಟುಂಬಿಕ ಹಾಕಿ ಪಂದ್ಯಾವಳಿಯು ಸಹಕಾರವಾಯಿತು. ತದ ನಂತರದಲ್ಲಿ ಎಲ್ಲ ಸಮುದಾಯಗಳು ಹಂತ ಹಂತವಾಗಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ತಮ್ಮ ಸಮುದಾಯದ ಬಲವರ್ಧನೆ ಮತ್ತು ಸಂಘಟಿತ ಕಾರ್ಯಕ್ಕೆ ಅಣಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಆಯೋಜಕರ ಮನವಿಯ ಮೇರೆಗೆ ಸುಮಾರು 10 ಲಕ್ಷದ ಅನುದಾನ ಘೋಷಣೆ ಮಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸುಬೇದಾರ್ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಬಂಟ್ವಾಳ ಜಿಲ್ಲಾಧ್ಯಕ್ಷರು ಮೊಣ್ಣಪ್ಪ ಪೂಜಾರಿ ,ಉದ್ಯಮಿ ರಮೇಶ್ ಪೂಜಾರಿ,ಮತ್ತು ತೀಯನ್ ಮಹಾ ಸಭಾ. ಪ್ರಮುಖರಾದ ಎ.ಎನ್. ಪದ್ಮನಾಭ ಅವರು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ, ಸಾಧಕ ವ್ಯಕ್ತಿಗಳಿಗೆ ಸನ್ಮಾನ, ಲಕ್ಕಿ ಡಿಪ್ ಡ್ರಾ, ಮತ್ತು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿಲ್ಲವ ಸೇವಾ ಸಂಘ ದ ಅಧ್ಯಕ್ಷರಾದ ಬಿ.ಎಂ. ಗಣೇಶ್ ಅವರು, ಮೂರು ದಿನಗಳ ಕಾಲ ಸಮುದಾಯ ಬಾಂದವರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಯಿತು.
ಬಾಂಧವರಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳನ್ನು ಸಮಾಜ ಪರಿಚಯ ಮಾಡಲಾಗಿದೆ. ಸಂಘ ಮುಂದೆಯು ಸಮುದಾಯ ಬಾಂಧವರನ್ನು ಗುರುತಿಸುವ ಕಾರ್ಯ ಮಾಡುತ್ತದೆ. ಸಂಘದ ಬಹು ನಿರೀಕ್ಷೆಯ ಸಭಾ ಭವನದ ಕಾಮಗಾರಿಗಳು ಭರದಿಂದ ಸಾಗುತಿದ್ದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಥಿಕವಾಗಿ ನೆರವು ನೀಡಬೇಕು ಎಂದು ಮನವಿ ಮಾಡಿದರು
ಮೂರು ದಿನಗಳು ಕಾಲ ನಡೆದ ಕ್ರೀಡಾ ಕೂಟದಲ್ಲಿ ಕ್ರಿಕೆಟ್, ಕಾಲ್ಚಂಡು, ಹಗ್ಗ ಜಗ್ಗಾಟ, ವಾಲಿಬಾಲ್, ಶಟಲ್, ತ್ರೋ ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಸಮೂದಾಯ ಬಾಂದವರಿಗಾಗಿ ಅಯೋಜಿಸಲಾಗಿತ್ತು. ವಿಜೇತ ತಂಡಗಳಿಗೆ ಪಾರಿತೋಷಕ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ದ ವೇದಿಕೆಯಲ್ಲಿ ಪಟ್ಟಡ ರಂಜಿ ಪೂಣಚ್ಚ ,ಉದ್ಯಮಿ ವೆಂಕಪ್ಪ ಪೂಜಾರಿ, ಅಪ್ಪು ರವೀಂದ್ರ, ಬಿಲ್ಲವ ಸೇವಾ ಸಂಘ ಮಡಿಕೇರಿ ಯ ಅದ್ಯಕ್ಷರು ಲೀಲಾವತಿ, ನಾಪೋಕ್ಲು ಬಿಲ್ಲವ ಸೇವಾ ಸಂಘ ದ ಅದ್ಯಕ್ಷರಾದ ಪ್ರದೀಪ್ ,ಸೋಮವಾರಪೇಟೆ ಬಿಲ್ಲವ ಸೇವಾ ಸಂಘ ದ ಅದ್ಯಕ್ಷರಾದ ಚಂದ್ರಹಾಸ್ , ಅವರುಗಳು ಹಾಜರಿದ್ದರು.
ಬಿಲ್ಲವ ಸೇವಾ ಸಂಘ ವಿರಾಜಪೇಟೆ ಖಾಜಂಚಿಗಳಾದ ಬಿ.. ಸತೀಶ್ ಪೂಜಾರಿ ಸ್ವಾಗತಿಸಿ. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ ವಂದಿಸಿದರು.
ಮೂರು ದಿನಗಳು ನಡೆದ ಕ್ರೀಡಾ ಕೂಟದಲ್ಲಿ ಬಿಲ್ಲವ ಸೇವಾ ಸಂಘ ವಿರಾಜಪೇಟೆ ಪದಾಧಿಕಾರಿಗಳು, ಸದಸ್ಯರು, ಜಿಲ್ಲೆ ವಿವಿಧ ಸ್ಥಳಗಳ ಬಿಲ್ಲವ ಸಂಘದ ಸದಸ್ಯರು, ಸಮುದಾಯದ ಪ್ರಮುಖರು, ಸಮುದಾಯ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ; ಕಿಶೋರ್ ಕುಮಾರ್ ಶೆಟ್ಟಿ