ಬಿಟ್ಟಂಗಾಲ; 34ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ

Apr 2, 2026 - 11:46
 0  285
ಬಿಟ್ಟಂಗಾಲ; 34ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ

ವಿರಾಜಪೇಟೆ;ಶ್ರೀ ಮುತ್ತಪ್ಪನ್ ಮತ್ತು ಇತರ ದೈವಗಳ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ವಿರಾಜಪೇಟೆ ಬಿಟ್ಟಂಗಾಲ ಕಂಪನಿಮೊಟ್ಟೆ ಗ್ರಾಮದ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ 34 ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು.

ತಾ. 31 ರಂದು ಬೆಳಿಗ್ಗೆ 06 ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವ ಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋಹಣ ಬಳಿಕ ಸನೀಹದ ಶ್ರೀ ಕಣ್ಣಂಬಾಡಿ ಅಮ್ಮ ಅವರಿಗೆ ಪೂಜೆ ಸಲ್ಲಿಸಲಾಯಿತು. ರಾತ್ರಿ 8 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, ಗುಳಿಗನ್ ತೊಟ್ಟಂ ತೆರೆ, ನಡೆಯಿತು. ದೇವಾಲಯದ ಅನತಿ ದೂರದಲ್ಲಿ ಬಸುರಿಮಾಲ ದೇವರ ತೊಟ್ಟಂ ತೆರೆಯು ಮುಖ್ಯ ರಸ್ತೆಗಾಗಿ ದೇವಾಲಯ ಕ್ಕೆ ಆಗಮನವಾಯಿತು.

ಮೆರವಣಿಗೆಯಲ್ಲಿ ನೂರಾರು ಭಕ್ತರು ಸೇರಿದಂತೆ ಮಹಿಳೆಯರು ಹಣತೆ ದೀಪದೊಂದಿಗೆ ಸ್ವಾಗತಿಸಿದರು. ಬಳಿಕ ದೇವಾಲಯದ ಆವರಣದಲ್ಲಿ ವಿಶೇಷ ಅನ್ನಸಂತರ್ಪಣೆ ನಡೆಯಿತು.ತಾ. 01 ರಂದು ಮುಂಜಾನೆ ಗುಳಿಗನ್ ತೆರೆ, ಶ್ರೀ ಮುತ್ತಪ್ಪನ್ ಶ್ರೀ ತಿರುವಪ್ಪನ್ ತೆರೆಗಳು ಆಕರ್ಷಕ ಬಸುರಿಮಾಲ ತೆರೆಯೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಸಂಪನ್ನಗೊಂಡಿತ್ತು.

ತೆರೆ ಮುಕ್ತಾಯ ಕಂಡು ಆಗಮಿಕ ಭಕ್ತರಿಗೆ ದೇಗುಲದ ವತಿಯಿಂದ ಅನ್ನಸಂತರ್ಪಣೆ ನಡೆಯಿತು ರಾತ್ರಿ ವಿಶೇಷ ಸಿಡಿ ಮದ್ದು ಪ್ರದರ್ಶನ ಭಕ್ತರ ಮನಸೂರೆಗೊಂಡಿತ್ತು. ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯ ದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿ ವಿವಿಧ ಗ್ರಾಮಗಳಿಂದ ಮತ್ತು ನಗರ ವ್ಯಾಪ್ತಿಯ ಆಗಮಿಸಿದ ಸಾವಿರಾರು ಸಂಖ್ಯೆ ಯ ಭಕ್ತರು ವಾರ್ಷಿಕ ತೆರೆ ಮಹೋತ್ಸವ ಸಂದರ್ಭದಲ್ಲಿ ಹಾಜರಿದ್ದು ದೈವಗಳ ಅನುಗ್ರಹ ಪಡೆದು ಪುನಿತರಾದರು. 

ವರದಿ; ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0