ಬಿಟ್ಟಂಗಾಲ;ಸರ್ವಧರ್ಮ ಸಮನ್ವಯ ಮಹಾ ಶಿವರಾತ್ರಿ ಕ್ರೀಡಾಕೂಟವನ್ನು ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

Feb 15, 2026 - 17:56
 0  217
ಬಿಟ್ಟಂಗಾಲ;ಸರ್ವಧರ್ಮ ಸಮನ್ವಯ ಮಹಾ ಶಿವರಾತ್ರಿ ಕ್ರೀಡಾಕೂಟವನ್ನು ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ತಾಲೂಕಿನ ಬಿಟ್ಟಂಗಾಲದ ನವೋದಯ ಯುವಕ ಸಂಘ ವತಿಯಿಂದ ಆಯೋಜಿಸಿದ, ಸರ್ವಧರ್ಮ ಸಮನ್ವಯ ಮಹಾ ಶಿವರಾತ್ರಿ ಪ್ರಯುಕ್ತ ಕ್ರೀಡಾಕೂಟದಲ್ಲಿ ವಿಶೇಷ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಹಾಗೂ ಶಾಸಕರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಭಾಗವಹಿಸಿದರು.

ಬಿಟ್ಟಂಗಾಲದ ಪೆಗ್ಗರಿಕಾಡು ಭಾಗದಲ್ಲಿ ಆಯೋಜನ ಗೊಂಡ ಈ ಕ್ರೀಡಾಕೂಟಕ್ಕೆ ಶುಭ ಕೋರಿದ ಮಾನ್ಯ ಶಾಸಕರು, ಮಹಾಶಿವರಾತ್ರಿ ಪ್ರಯುಕ್ತ ಆ ಯೋಜನೆಗೊಂಡ ಈ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರು ಯಶಸ್ಸು ಕಾಣುತ್ತಾ, ಆ ಮಹಾದೇವನ ಕೃಪೆಗೆ ಪಾತ್ರರಾಗುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನವೋದಯ ಯುವಕ ಸಂಘದ ಅಧ್ಯಕ್ಷರು ಟಿ ಪಿ ಸುಬ್ಬಯ್ಯ, ಬಿಟ್ಟಂಗಾಲ ಪಂಚಾಯಿತಿ ಅಧ್ಯಕ್ಷರು ಪ್ರಸನ್ನ ಸುಬ್ಬಯ್ಯ, ಸದಸ್ಯರು ಶಾರದಾ, ವಿರಾಜಪೇಟೆ ಪುರಸಭೆಯ ನಿಕಟಪೂರ್ವ ಸದಸ್ಯರು ಮೊಹಮ್ಮದ್ ರಾಫಿ, ಶ್ರೀ ಅಮ್ಮೆಕಂಡ ಜೋಯಪ್ಪ, ನವೋದಯ ಯುವಕ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0