"COMPANIONS" ಡ್ರಗ್ಸ್ ಮುಕ್ತ ಭಾರತ" :ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿಗೆ ವರ್ಣರಂಜಿತ ತೆರೆ | "COMPANIONS" ವಿದ್ಯಾರ್ಥಿಗಳು ಆಯೋಜಿಸಿದ ಫುಟ್ಬಾಲ್ ಪಂದ್ಯಾವಳಿಯ ಬಗ್ಗೆ ಗಣ್ಯರ ಮೆಚ್ಚುಗೆ
ವಿರಾಜಪೇಟೆ:ಇಂದಿನ ಪ್ರಸ್ತುತ ಯುವ ಜನಾಂಗವಿ ಮಾದಕ ವ್ಯಸನದ ಬಳಕೆಯಿಂದ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಯುವ ಸಮಜದಾಯವು ಕ್ರೀಡೆಯಿಂದ ಆರೋಗ್ಯ ಎಂಬ ಅಭಿಯಾನದಡಿಯಲ್ಲಿ ಹೊಸ ಮಾರ್ಗ ಕಂಡುಕೊಂಡಿರುವುದು ಶ್ಲಾಘನೀಯ ಎಂದು ಗಣ್ಯರ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಕಂಪೇನಿಯನ್ಸ್ ವಿದ್ಯಾರ್ಥಿ ಬಳಗ ವಿರಾಜಪೇಟೆ ವತಿಯಿಂದ ಡ್ರಗ್ಸ್ ಮುಕ್ತ ಭಾರತ ಅಭಿಯಾನ ಅಡಿಯಲ್ಲಿ ಅಖಿಲ ಭಾರತ ಮುಕ್ತ ಪುರುಷರ 5+2 ಕಾಲ್ಚೆಂಡು ಪಂದ್ಯಾಟ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ವಲ್ಡ್ ಬುಕ್ ಅಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಅಫ್ ರೆಕಾರ್ಡ್ಸ್ ವಿಜೇತರಾದ ಕೇರಳ ರಾಜ್ಯದ ಮಲಪುರಂ ನಿವಾಸಿ ಉಮ್ಮರ್ ಎಂ.ಎನ್ ಅವರು,ಯುವಕರಲ್ಲಿ ಪ್ರಸ್ತುತ ದಿನಗಳಲ್ಲಿ ಮಾದಕ ವಸ್ತುಗಳ ಉಪಯೋಗ ಹೆಚ್ಚಾಗುತ್ತಿದ್ದು ಇದರಿಂದ ಕುಟುಂಬಗಳು ಬೀದಿಪಾಲಾಗುತ್ತಿದೆ. ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಾ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಸಮಾಜ ಮತ್ತು ಕುಟುಂಬದ ಹಿತದೃಷ್ಟಿಯಿಂದ ಮಾದಕ ವಸ್ತುಗಳ ಉಪಯೋಗದ ವಿರುದ್ದ ಹೋರಾಡುವ ಅನಿವಾರ್ಯ ಇದೆ. ಈ ನಿಟ್ಟಿನಲ್ಲಿ ಡ್ರಗ್ಸ್ ಮುಕ್ತ ಭಾರತ ಎಂಬ ಟ್ಯಾಗ್ ನಲ್ಲಿ ಕಾಲ್ಚೆಂಡು ಪಂದ್ಯಾಟ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಸ್ಟುಡೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಕೊಡಗು ನಿರ್ದೇಶಕ ರಾದ ಸುಹಾನ್ ಕಬೀರ್ ಅವರು ಮಾತನಾಡಿ, ಡ್ರಗ್ಸ್ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಹೋರಾಟ ಯುವಜನತೆಯ ಧ್ಯೇಯವಾಗಬೇಕು. ಯುವ ಸಮೂಹವು ದಿಕ್ಕು,ದೆಸೆಯಿಲ್ಲದೆ ಸಾಗುತ್ತಿದೆ. ಸಮಾಜಕ್ಕೆ ಮಾರಕವಾಗಿ ಪರಿಣಮಿಸುವ ಕಾರ್ಯಕ್ಕೆ ಎಂದಿಗೂ ಮನಸೋತು ಹೋಗದೆ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಿರಿ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಿಸ್ರಿಯಾ, ಕೆ.ವೈ, ನಿವೃತ್ತ ಶಿಕ್ಷಕರಾದ ವಿಜಯನ್ ಸಿದ್ದಾಪುರ, ಉದ್ಯಮಿ ಸಿ.ಎ.ರಾಸಿಕ್, ಪುರಸಭೆ ವಿರಾಜಪೇಟೆ ಸದಸ್ಯರಾದ ಮೊಹಮ್ಮದ್ ರಾಫಿ ಮತ್ತು ಹೆಚ್.ಎಸ್. ಮತೀನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ