ಚೆಟ್ಟಳ್ಳಿ:ಕಾಡು ಹಂದಿಗಳ ಹಾವಳಿ,ಒಂದೇ ವಾರದಲ್ಲಿ ಏಳು ಮಂದಿಗೆ ಗಾಯ

ಚೆಟ್ಟಳ್ಳಿ:ಕಾಡು ಹಂದಿಗಳ ಹಾವಳಿ,ಒಂದೇ ವಾರದಲ್ಲಿ ಏಳು ಮಂದಿಗೆ ಗಾಯ

ಚೆಟ್ಟಳ್ಳಿ : ಕಾಡಾನೆ ಹಾವಳಿಯಿಂದ ಬೇಸತ್ತ ನಿವಾಸಿಗಳಿಗೆ ಇದೀಗ ಕಾಡು ಹಂದಿಗಳ ಹಾವಳಿಯು ಇನ್ನಷ್ಟು ಸಮಸ್ಯೆ ಉಂಟುಮಾಡುತ್ತಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸಾರ್ವಜನಿಕರು ಒತ್ತಾಯಿಸಿದ ಘಟನೆ ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ಒಂದು ವಾರದಲ್ಲಿ 7 ಮಂದಿಗೆ ಗಾಯ : ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿ ಗ್ರಾಮದಲ್ಲಿ ಮಿತಿ‌ಮೀರಿದ ಕಾಡು ಹಂದಿಗಳ ಹಾವಳಿಯಿಂದ ಕಳೆದ ಒಂದು ವಾರದಲ್ಲಿ ಏಳು ಮಂದಿ‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ತೆರಳುವ ಸಂಧರ್ಭದಲ್ಲಿ ದಿಡೀರನೆ ರಸ್ತೆ ದಾಟುವ ಕಾಡು ಹಂದಿಗಳು ವಾಹನಕ್ಕೆ ಡಿಕ್ಕಿ ಹೊಡೆಯುತ್ತವೆ. ಈ ಸಂಧರ್ಭದಲ್ಲಿ ಸವಾರರು ನಿಯಂತ್ರಣ ತಪ್ಪಿ ಗಂಭೀರವಾದ ಗಾಯಗೊಳಗಾಗುತ್ತಾರೆ.ಈಗಾಗಲೇ ಏಳು ಮಂದಿ ಗಾಯಗೊಂಡು ಚಿಕಿತ್ಸೆ ಗೆ ದಾಖಲಾಗಿದ್ದಾರೆ.