ಚೆಟ್ಟಿಮಾನಿ:ಶಾರದ ಪೂಜೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಚೆಟ್ಟಿಮಾನಿ:ಶಾರದ ಪೂಜೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ:ತಾಲೂಕಿ ಚೆಟ್ಟಿಮನಿ ಭಾಗದಲ್ಲಿ ಪೂವ್ವಲಮಾನಿ ಭಾಗದಲ್ಲಿ ಆಯೋಜಿಸಿದ, 4ನೇ ವರ್ಷದ ಶಾರದ ಪೂಜಾ ಹಾಗೂ ಕ್ರೀಡಾಕೂಟದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಪೂವ್ವಲಮಾನಿಯ ನಾಗರಿಕ ಸೇವಾ ಸಮಿತಿಯವರು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಶಾರದ ಪೂಜೆಯ ಪ್ರಸಾದ ಸ್ವೀಕರಿಸಿದ ಬಳಿಕ, ಕ್ರೀಡಾಕೂಟವನ್ನು ಉದ್ಘಾಟಿಸಿದ ಶಾಸಕರು ಶುಭ ಕೋರಿದರು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ದಿನೇಶ್, ಸುರೇಂದ್ರ, ಚೆಟ್ಟಿಮನಿ ವಲಯ ಅಧ್ಯಕ್ಷರು ಕೀರ್ತಿ ಉತ್ತಪ್ಪ, ಕುಂದಚೇರಿ ಗ್ರಾಮ ಪಂಚಾಯಿತಿ ಸದಸ್ಯರು ಹ್ಯಾರೀಶ್, ಸುನಿಲ್ ಪತ್ ರಾವ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.