ಎಮ್ಮೆಮಾಡು ಎಸ್.ವೈ.ಎಸ್ ಸರ್ಕಲ್ ವತಿಯಿಂದ ಆಸ್ಪತ್ರೆ, ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ

ಎಮ್ಮೆಮಾಡು ಎಸ್.ವೈ.ಎಸ್  ಸರ್ಕಲ್ ವತಿಯಿಂದ  ಆಸ್ಪತ್ರೆ, ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ  ಸ್ವಚ್ಛತಾ ಕಾರ್ಯಕ್ರಮ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು:ಎಮ್ಮೆಮಾಡು ಎಸ್ ವೈ ಎಸ್ ಟೀಮ್ ಇಸಾಬ ಕಾರ್ಯಕರ್ತರಿಂದ ಎಮ್ಮೆಮಾಡು ಶಾಖಾ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆ, ಪೊಲೀಸ್ ಠಾಣೆ, ಸೇರಿದಂದೆ ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ರೆಶ್ ಇಂಡಿಯಾ ದ್ಯೇಯ ವಾಕ್ಯದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ನಡೆಸಲಾಯಿತು.ಎಮ್ಮೆಮಾಡು ಶಾಖೆಗೆ ಒಳಪಡುವ ಭಾಗಮಂಡಲದ ಪೊಲೀಸ್ ಠಾಣೆ, ಆರೋಗ್ಯ ಕೇಂದ್ರ, ಪಂಚಾಯತ್ ವಠಾರ,ವಿದ್ಯುತ್ ಕಛೇರಿ,ನಾಡಕಛೇರಿ, ಶಿಕ್ಷಣ ಸಂಸ್ಥೆಗಳ ಆವರಣಗಳನ್ನು ಹಾಗೂ ವಿವಿಧೆಡೆ ನಾಮಫಲಕಗಳನ್ನು ಎಸ್ ವೈ ಎಸ್ ಇಸಾಬ ಕಾರ್ಯಕರ್ತರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. 

ಎಸ್ ವೈ ಎಸ್ ರಾಜ್ಯ ಸಮಿತಿ ಸಂಚಾಲಕರಾದ ಬಿ.ಯು ಅಶ್ರಫ್ ಅವರು ಮಾತನಾಡಿ ಜಿಲ್ಲಾಧ್ಯಂತ ಸುರಿದ ಮಳೆಯಿಂದಾಗಿ ವಿವಿಧ ಸರ್ಕಾರಿ ಕಛೇರಿಗಳ ನಾಮಫಲಕಗಳು ಕಾಣದೆ ಕಳೆಗುಂದಿಗೆ ಬಿದ್ದಿವೆ. ಪೊಲೀಸ್ ಠಾಣೆ, ಆರೋಗ್ಯಕೇಂದ್ರ,ಸರ್ಕಾರಿ ಕಛೇರಿ, ಶಿಕ್ಷಣ ಸಂಸ್ಥೆಗಳ ವಠಾರ ಮತ್ತು ನಾಮಫಲಕಗಳನ್ನು ಸ್ವಚ್ಚಗೊಳಿಸಲು ಫ್ರೆಶ್ ಇಂಡಿಯಾ ಕಾರ್ಯಕ್ರಮದ ಮೂಲಕ ಎಮ್ಮೆಮಾಡು ಪಡಿಯಾಣಿ,ಪಳ್ಳಿರಾಣೆ ತಾವೂರು,ಅಯ್ಯಂಗೇರಿ, ಚೆಟ್ಟಿಮಾನಿ ಸೇರಿದಂತೆ ಆರು ಗ್ರಾಮಗಳನ್ನು ಒಳಗೊಂಡ ಎಮ್ಮೆಮಾಡು ವೃತ್ತದ ಎಸ್ ವೈ ಎಸ್ ಇಸಾಬಾ ಟೀಮ್ ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಕಳೆದ ಎರಡು ದಿನಗಳಿಂದ ಆಯೋಜಿಸಲಾಗಿದೆ ಎಂದರು.

ಸಂಘಟನೆಯ ಕಾರ್ಯಕರ್ತರ ಸ್ವಚ್ಛತಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾಗಮಂಡಲ ಪೊಲೀಸ್ ಠಾಣೆಯ ಅಧಿಕಾರಿಗಳು, ಶಾಲಾ ಶಿಕ್ಷಕರು, ಸರ್ಕಾರಿ ಕಚೇರಿ ಅಧಿಕಾರಿಗಳು ಮಾತನಾಡಿ ಮುಂದೆಯೂ ಇದೆ ರೀತಿ ನಿಮ್ಮ ಸಾರ್ವಜನಿಕರ ಸೇವೆ ಮುಂದುವರೆಯಲಿ ಎಂದು ಶ್ಲಾಘನೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಸ್ವಚ್ಛತಾ ಕಾರ್ಯದಲ್ಲಿ ಸಂಘಟನೆ ಜಿಲ್ಲಾ ಧ್ಯಕ್ಷರು,ಮಡಿಕೇರಿ ಡಿವಿಷನ್ ಸಮಿತಿ ಸದಸ್ಯರು, ಎಮ್ಮೆಮಾಡು ಸರ್ಕಲ್ ಸಮಿತಿ ಪದಾಧಿಕಾರಿಗಳು, ಟೀಮ್ ಇಸಾಬಾ ಕಾರ್ಯಕರ್ತರು ಪಾಲ್ಗೊಂಡಿದ್ದರು.