ಡಿಜಿಪಿಎಸ್ ಸರ್ವೆ : ಅನುಮೋದನೆಗೆ ಶಾಸಕ ಡಾ. ಮಂತರ್‌ ಗೌಡ ಮನವಿ

Jan 31, 2026 - 21:25
 0  418
ಡಿಜಿಪಿಎಸ್ ಸರ್ವೆ : ಅನುಮೋದನೆಗೆ ಶಾಸಕ ಡಾ. ಮಂತರ್‌ ಗೌಡ ಮನವಿ

ಮಡಿಕೇರಿ; ಸೋಮವಾರಪೇಟೆ ತಾಲೂಕು ಬೀದಳ್ಳಿಯಿಂದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮ ಪಂಚಾಯಿತಿಯ ವಣಚಲು ಮುಖಾಂತರ ಕಡಮಕಲ್ಲು ಹೋಗುವಂತಹ ಮಾರ್ಗದಲ್ಲಿ ಪುಷ್ಪಗಿರಿ ವನ್ಯಜೀವಿ ಹಾಗೂ ಅರಣ್ಯ ಪ್ರದೇಶ ಬರುವ ಹಿನ್ನೆಲೆ ರಸ್ತೆ ನಿರ್ಮಾಣಕ್ಕೆ ಡಿ.ಜಿ.ಪಿ.ಎಸ್. ಸರ್ವೆ ಮಾಡುವುದಕ್ಕೆ ಅರಣ್ಯ ಸಚಿವರು ಪರಿವೇಶ್ ಪೋರ್ಟಲ್ ಮೂಲಕ ಅನುಮೋದನೆ ನೀಡುವಂತಾಗಬೇಕೆಂದು ಶಾಸಕ ಡಾ.ಮಂತರ್ ಗೌಡ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಮನವಿ ಮಾಡಿದರು.

ಸದನದಲ್ಲಿ ಈ 2 ಮಾರ್ಗಗಳ ಬಗ್ಗೆ ವಿವರಣೆ ಗಳಲ್ಲಿ ನೀಡಿದ ಶಾಸಕರು, ಸರ್ವೇ ಆದ ಬಳಿಕ ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಅನುದಾನ ಒದಗಿಸಿ ಹುಟಕ್ಕೆ ಎರಡು ರಸ್ತೆಗಳನ್ನು ನಿರ್ಮಿಸುವಂತೆಯೂ ಈ ಸಂದರ್ಭ ಮಾನವಿ ಮಾಡಿದರು. ದಕ್ಷಿಣಕನ್ನಡ, ಕೊಡಗು ಗಡಿಯಲ್ಲಿರುವ ಕಡಮಕಲ್ಲು ಹಳ್ಳಿಗೆ ತಲುಪುವುದಕ್ಕೆ ಗಾಳಿಬೀಡು ಪಂಚಾಯಿತಿಯಿಂದ ಸುಳ್ಯ ಪಟ್ಟಣ ದಾಟಿ ಸುಮಾರು 120 ಕಿ.ಮೀ ಆಗುತ್ತೆ. ಇದನ್ನು ಕೇವಲ 20 ಕಿ.ಮೀ ಗೆ ಇಳಿಸಲು ಹೊಸ ರಸ್ತೆ ಸಹಕಾರಿಯಾಗಲಿದೆ ಎಂದು ಗಮನ ಸೆಳೆದರು.

 ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವರು, ಪರಿವೇಶ್ ಪೋರ್ಟಲ್‌ನಲ್ಲಿ ಕ್ಲಿಯರೆನ್ಸ್ ಸಂಬಂಧ ಮಾಹಿತಿ ಅಪ್ ಲೋಡ್ ಮಾಡಿದ ಮೇಲೆ. ಅದಕ್ಕೆ ನಿಗದಿಪಡಿಸಿದ ಮೊತ್ತ ಪಾವತಿಸಬೇಕು. ನಂತರ ಕಾಂಪೆನ್ನೇಟರಿ ಆಫಾರೆಸ್ಟೇಷನ್ (ಅರಣ್ಯೀಕರಣ) ಮೊತ್ತ ಕೂಡ ಪಾವತಿಸಬೇಕು. ಇವೆಲ್ಲ ಮಾಡಿದರೆ ಕೇಂದ್ರ ಸರಕಾರದ ಅರಣ್ಯ ಸಚಿವಾಲಯದಿಂದ ರಾಜ್ಯ ಸರಕಾರವು ಅನುಮೋದನೆ ಪಡೆಯಬಹುದು. ನಂತರ ಎಷ್ಟು ವ್ಯಾಪ್ತಿ ಅರಣ್ಯ ಅಗತ್ಯವಿದೆ. ಅಷ್ಟು ಬಿಡುಗಡೆಗೊಳಿಸುವಂತ ಕೆಲಸ ಅರಣ್ಯ ಇಲಾಖೆ ಮಾಡಲಿದೆ ಎಂಬುದಾಗಿ ಉತ್ತರಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0