ಡಿಜೆ ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ; ಖಾಸಗಿ ಚಾಟ್ ವೈರಲ್, ಸಂತ್ರಸ್ತೆಯಿಂದ ಡಿಜಿಪಿ ಕಚೇರಿಗೆ ದೂರು : ಮುದ್ದು, BJ ಬೇಕು ಎಂದೆಲ್ಲ ವಾಟ್ಸಾಪ್!

Oct 22, 2025 - 13:03
 0  3.6k
ಡಿಜೆ ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ; ಖಾಸಗಿ ಚಾಟ್ ವೈರಲ್, ಸಂತ್ರಸ್ತೆಯಿಂದ ಡಿಜಿಪಿ ಕಚೇರಿಗೆ ದೂರು : ಮುದ್ದು, BJ ಬೇಕು ಎಂದೆಲ್ಲ ವಾಟ್ಸಾಪ್!

ಬೆಂಗಳೂರು, ಅ. 22: ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಅವರ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯೋರ್ವರು ಅತ್ಯಾಚಾರದ ಆರೋಪ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

 ಮದುವೆಯ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಸುನೀಲ್ ಅವರು “ಮನೆ ಕೊಡಿಸುತ್ತೇನೆ, ಬ್ಯೂಟಿ ಪಾರ್ಲರ್ ಆರಂಭಿಸಿಕೊಡುತ್ತೇನೆ” ಎಂದು ಆಮಿಷವೊಡ್ಡಿ, ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಮಹಿಳೆಯನ್ನು ತಮ್ಮ ನಿವಾಸ ಹಾಗೂ ಹೋಟೆಲ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಬಳಿಕ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡು, “ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಇನ್ಸ್‌ಪೆಕ್ಟರ್ ಪ್ರತಿದಿನ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇವರಿಬ್ಬರ ನಡುವಿನ ಖಾಸಗಿ ಚಾಟಿಂಗ್ ಮತ್ತು ವಿಡಿಯೋ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಬ್ಬರ ನಡುವಿನ ಸಂಭಾಷಣೆಯಲ್ಲಿ, ಚಿನ್ನಿ ಮುದ್ದು ಎಂದು ಪರಸ್ಪರ ಮಾತನಾಡಿಕೊಂಡಿರುವುದು ಕಂಡು ಬಂದಿದೆ.

 ನ್ಯಾಯಕ್ಕಾಗಿ ಮಹಿಳೆ ಈಗ ನೇರವಾಗಿ ಪೊಲೀಸ್ ಮಹಾನಿರ್ದೇಶಕರ (DGP) ಕಚೇರಿಗೆ ದೂರು ಸಲ್ಲಿಸಿದ್ದಾರೆ.

What's Your Reaction?

Like Like 3
Dislike Dislike 0
Love Love 3
Funny Funny 6
Angry Angry 5
Sad Sad 4
Wow Wow 1