ಡಿಜೆ ಹಳ್ಳಿ ಇನ್ಸಪೆಕ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು : ......! ಬರ್ತಿದೆ, ಯೂ ಆರ್ ಆಸಮ್ ಎಟ್ ಬೆಡ್ ಎಂದೆಲ್ಲ ಪೋಲಿ ಪೋಲಿ ಚಾಟಿಂಗ್ ಮಾಡಿದ್ದ ಪೊಲೀಸಪ್ಪ

Oct 26, 2025 - 19:08
Oct 26, 2025 - 19:13
 0  1.2k
ಡಿಜೆ ಹಳ್ಳಿ ಇನ್ಸಪೆಕ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು : ......! ಬರ್ತಿದೆ, ಯೂ ಆರ್ ಆಸಮ್ ಎಟ್ ಬೆಡ್ ಎಂದೆಲ್ಲ ಪೋಲಿ ಪೋಲಿ ಚಾಟಿಂಗ್ ಮಾಡಿದ್ದ ಪೊಲೀಸಪ್ಪ

ಬೆಂಗಳೂರು, ಅ.26: ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿರುವುದಾಗಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ದೂರು ಪ್ರಕಾರ, ಅಲ್ಪಸಂಖ್ಯಾತ ಸಮುದಾಯದ ಯುವತಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಇನ್ಸ್‌ಪೆಕ್ಟರ್ ಸುನೀಲ್, ಮದುವೆಯ ಭರವಸೆ ನೀಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಬಾರಿ ಲೈಂಗಿಕ ಸಂಬಂಧ ಬೆಳೆಸಿದ್ದಾರೆ ಎನ್ನಲಾಗಿದೆ. ಮನೆ ಕೊಡಿಸುತ್ತೇನೆ, ಬ್ಯೂಟಿ ಪಾರ್ಲರ್ ಆರಂಭಿಸಲು ಸಹಾಯ ಮಾಡುತ್ತೇನೆ ಎಂದು ನಂಬಿಸಿ ವಂಚನೆ ನಡೆಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆಗೆ ಇನ್ಸ್ಪೆಕ್ಟರ್ ಸುನಿಲ್ ನನಗೆ ಮೂಡ್ ಬರ್ತಿದೆ, ಯೂ ಆರ್ ಆಸಮ್ ಎಟ್ ಬೆಡ್ ಎಂದೆಲ್ಲಾ ಸಂದೇಶ ಕಳುಹಿಸಿರುವ ಚಾಟಿಂಗ್ ಬಹಿರಂಗವಾಗಿದೆ. ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಗೋವಿಂದಪುರದ ಖಾಸಗಿ ಹೋಟೆಲ್, 8ನೇ ಮೈಲಿಯಲ್ಲಿನ ಮನೆ ಮತ್ತು ಹೋಟೆಲ್‌ನಲ್ಲಿ ಹಲವಾರು ಬಾರಿ ಅತ್ಯಾಚಾರ ಎಸಗಲಾಗಿದೆ. ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದ್ದು, ವಿಚಾರ ಬಯಲಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಸಂತ್ರಸ್ತೆಯು ಈ ಹಿಂದೆ ಡಿಜಿಪಿ ಕಚೇರಿಗೂ ದೂರು ನೀಡಿದ್ದರೆಂದು ಮೂಲಗಳು ತಿಳಿಸಿವೆ. ಬಳಿಕ ನೇರವಾಗಿ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಈ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಸುನೀಲ್ ಅವರನ್ನು ಮೊದಲ ಆರೋಪಿಯಾಗಿ ಹಾಗೂ ಡಿಜೆ ಹಳ್ಳಿ ಠಾಣೆಯ ಎಎಸ್‌ಐ ಪ್ರಕಾಶ್ ಅವರನ್ನು ಎರಡನೇ ಆರೋಪಿಯಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಘಟನೆಯ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 1
Wow Wow 0