ದಾವಣಗೆರೆ ವಿಧಾನಸಭಾ ಉಪ ಚುನಾವಣೆ:ಕಾಂಗ್ರೆಸ್ ಅಭ್ಯರ್ಥಿ‌‌ ಪರ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಬಿರುಸಿನ‌ ಪ್ರಚಾರ

Apr 3, 2026 - 12:32
 0  183
ದಾವಣಗೆರೆ ವಿಧಾನಸಭಾ ಉಪ ಚುನಾವಣೆ:ಕಾಂಗ್ರೆಸ್ ಅಭ್ಯರ್ಥಿ‌‌ ಪರ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಬಿರುಸಿನ‌ ಪ್ರಚಾರ

ದಾವಣಗೆರೆ:ವಿಧಾನಸಭಾ ಉಪ ಚುನಾವಣಾ ಪ್ರಚಾರದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ರವರ ನೇತೃತ್ವದಲ್ಲಿ ಕೊಡಗು ಕಾಂಗ್ರೆಸ್ ಮುಖಂಡರ ತಂಡ ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಯವರಾದ ಸಮರ್ಥ್ ಮಲ್ಲಿಕಾರ್ಜುನ್‌ರವರ ಪರವಾಗಿ ನಿಗದಿತ ವಾರ್ಡ್ಗಳಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡುತ್ತಾ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುವುದರ ಮೂಲಕ, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಕೊಡಗು ಜಿಲ್ಲೆಯಿಂದ ತೆರಳಿದ ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾಂಗ್ರೆಸ್ ಅಭ್ಯರ್ಥಿ ಸಿದ್ದಾರ್ಥ್ ಮಲ್ಲಿಕಾರ್ಜುನ್ ಪರ ಪ್ರಚಾರ ಕಾರ್ಯ ಕೈಗೊಂಡರು. ಕೊಡಗು ಜಿಲ್ಲೆಯಿಂದ ಶ್ರೀ ಧರ್ಮಜ ಉತ್ತಪ್ಪ ರವರ ನೇತೃತ್ವದಲ್ಲಿ ತೆರಳಿದ ಪ್ರಮುಖರಲ್ಲಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟದ ರಂಜಿ ಪೂಣಚ್ಚ, ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಜ್ಷ ಕಾಂತರಾಜ್, ವಿರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಶಬೀರ್, ಕಾಳಿಮಾಡ ಪ್ರಶಾಂತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾಸಿರ್ ವಿರಾಜಪೇಟೆ ಇದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0