ಟೀಕ್, ಅಕೇಶಿಯ, ನೀಲಗಿರಿ ಮರ ತೆರವಿಗೆ ಆಗ್ರಹ
admincoorgdaily

ಮಡಿಕೇರಿ: ಟೀಕ್, ಅಕೇಶಿಯ, ನೀಲಗಿರಿ ಮರ ತೆರವಿಗೆ ಆಗ್ರಹಿಸಿ ಜೂ.೫ರಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹ್ಯೂಮನ್ ರೈಟ್ಸ್ ಇಂಟರ್‌ನ್ಯಾಷನಲ್ ಫೆಡರೇಶನ್ ರಾಜ್ಯಾಧ್ಯಕ್ಷ ಜಿ.ಹರೀಶ್ ಆಚಾರ್ಯ ತಿಳಿಸಿದರು.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನದಲ್ಲಿ ಈ ಮರಗಳಿಂದ ಆನೆಗಳಿಗೆ ಆಹಾರ ಸಿಗದೆ ನಾಡಿಗೆ ಬಂದು ಬೆಳೆ, ಮನೆ ನಾಶ ಮಾಡುತ್ತಿವೆ. ಅರಣ್ಯದಲ್ಲಿ ಆನೆಗಳಿಗೆ ಉಪಯುಕ್ತ ಮರ ಬೆಳೆಸಲು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹ್ಯೂಮನ್ ರೈಟ್ಸ್ ಇಂಟರ್‌ನ್ಯಾಷನಲ್ ಫೆಡರೇಶನ್ ಪ್ರಮುಖರಾದ ವಿಠಲ್ ನಾಣಯ್ಯ, ಸೋಮನಾಥ್, ವಸಂತ್ ಇದ್ದರು.