ವಿರಾಜಪೇಟೆ ಮಲಬಾರ್ ರಸ್ತೆಯ ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ದಿನೇಶ್ ಆಯ್ಕೆ

ವಿರಾಜಪೇಟೆ ಮಲಬಾರ್ ರಸ್ತೆಯ ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ದಿನೇಶ್ ಆಯ್ಕೆ

ಕಡಂಗ.ವಿರಾಜಪೇಟೆ ಮಲಬಾರು ರಸ್ತೆಯ ಆಟೋ ಚಾಲಕರ ಸಂಘದ ಅಧ್ಯಕ್ಷರಾಗಿ ಪೆರುಂಬಾಡಿಯ ದಿನೇಶ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕೊಡಗು ಜಿಲ್ಲಾ ಆಟೋ ಚಾಲಕರ ಸಂಘದ ಉಪಾಧ್ಯಕ್ಷರೂ MRAU ಮಾಜಿ ಅಧ್ಯಕ್ಷರಾದ ಶಶಿಧರ್ ಅವರ ಅದ್ಯಕ್ಷತೆಯಲ್ಲಿ ನಡೆದ ಆಟೋ ಚಾಲಕರ ಸಂಘದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಸುಣ್ಣದ ಬೀದಿಯ ಸಲೀಂ ಅವರನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಗುಂಡಿಕೆರೆ, ಸಹ ಕಾರ್ಯದರ್ಶಿಯಾಗಿ ವಿಜಯ್ ಪೆರುಂಬಾಡಿ, ಕೋಶಾದಿಕಾರಿಯಾಗಿ ಅಶ್ರಪ್ ಚೆಕ್ ಪೋಸ್ಟ್ ಆಯ್ಕೆಯಾದರು. ಆಡಳಿತ ಮಂಡಳಿ ಸದಸ್ಯರುಗಳಾಗಿ ಬಾಬು ವಿರಾಜಪೇಟೆ. ಜೋಯಿ( ಕುಟ್ಟನ್)ಹೆಗ್ಗಳ, ಉಬೈದ್ ಬೂದಿಮಾಳ,ಸಂಪತ್ ಪೆರುಂಬಾಡಿ, ರಾಧಾಕೃಷ್ಣನ್ ಪೆರುಂಬಾಡಿ, ಕೃಷ್ಣ ಪೆರುಂಬಾಡಿ,ದೀಪಕ್ ಹೆಗ್ಗಳ, ರಾಜೇಶ ಹೆಗ್ಗಳ,ನಿದೀಶ್ ಹೆಗ್ಗಳ, ಸುನಿಲ್ ಡಿಸೋಜ ಬೂದಿಮಾಳ ಆಯ್ಕೆಯಾಗಿದ್ದಾರೆ.