ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದ ಎಸ್.ಐ.ಆರ್ ವಾರ್ ರೂಮ್ ಪರಿಶೀಲನೆ

Jul 11, 2026 - 16:14
 0  141
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದ ಎಸ್.ಐ.ಆರ್ ವಾರ್ ರೂಮ್ ಪರಿಶೀಲನೆ

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರು ಇಂದು ಜಿಲ್ಲಾ ಕಾಂಗ್ರೆಸ್ ವಾರ್ ರೂಮ್ ಗೆ ಧೀಡೀರ್ ಭೇಟಿ ನೀಡಿ ವಾರ್ ರೂಮ್ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಸುಮಾರು ಎರಡು ಗಂಟೆಗಳ ಕಾಲ ವಾರ್ ರೂಂ ನಲ್ಲಿ ಕುಳಿತು ಎಸ್.ಐ.ಆರ್( ಮತದಾರರ ವಿಶೇಷ ಪರಿಷ್ಕರಣೆ) ಕಾರ್ಯಕ್ರಮದ ಪ್ರಗತಿಯ ಬಗ್ಗೆ ಜಿಲ್ಲಾ ವಾರ್ ರೂಮ್ ಅಧ್ಯಕ್ಷರಾದ ತೆನ್ನಿರ ಮೈನಾ ರವರಿಂದ ಮಾಹಿತಿಯನ್ನು ಕಲೆ ಹಾಕಿದರು.ತಾಲ್ಲೂಕುವಾರು ವಾರ್ ರೂಮ್ ಗಳು ಮತ್ತು ವಿವಿಧ ಎಸ್.ಐ.ಆರ್ ಸಹಾಯವಾಣಿ ಕೇಂದ್ರಗಳಿಂದ ಬಂದ ವರದಿಗಳನ್ನು ಪರಿಶೀಲಿಸಿದರು.

ವಾರ್ ರೂಂ ಚಟುವಟಿಕೆಗಳು ತೃಪ್ತಿಕರವಾಗಿದ್ದು ಕಾರ್ಯಕ್ರಮ ಪೂರ್ಣಗೊಳ್ಳುವ ವರೆಗೆ ಜಾಗೃತರಾಗಿ ಇರುವಂತೆ ಸಲಹೆ ನೀಡಿದರು. ಈ ಸಂಧರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್,ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ನಾಪೊಕ್ಲು ಬ್ಲಾಕ್ ಕಾರ್ಯಾಧ್ಯಕ್ಷರಾದ ಶೌಕತ್ ಆಲಿ,ನಿಕಟ ಪೂರ್ವ ಅಧ್ಯಕ್ಷರಾದ ಇಸ್ಮಾಯಿಲ್, ರಾಹುಲ್ ಗಾಂಧಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಅಬ್ದುಲ್ ಗಫೂರ್, ಮಡಿಕೇರಿ ಬ್ಲಾಕ್ ವಾರ್ ರೂಂ ಸಂಚಾಲಕ ಕೋಚನ ಚೇತನ್ ರವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0