ಜಿಲ್ಲಾ ಎಸ್ಎಸ್ಎಫ್ ವತಿಯಿಂದ "ಜಲ ಅವರದ್ದೂ ಕೂಡ" ಜೀವ ಹನಿ ಕಾರ್ಯಕ್ರಮಕ್ಕೆ ಚಾಲನೆ
admincoorgdaily

ವರದಿ :ಝಕರಿಯ ನಾಪೋಕ್ಲು
ವಿರಾಜಪೇಟೆ :ಬಿಸಿಲ ಬೇಗೆಯಿಂದ ನೀರು ಸಿಗದೆ ಬಳಲುತ್ತಿರುವ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿ ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜೀವ ಹನಿ ಕಾರ್ಯಕ್ರಮ ಆಯೋಜಿಸಲಾಯಿತು.
"ಜಲ ಅವರದ್ದೂ ಕೂಡ ನಮ್ಮಂತೆ ಅವರೂ ಬದುಕಲಿ" ಎಂಬ ಧ್ಯೇಯ ವಾಕ್ಯದೂಂದಿಗೆ ಪ್ರಾಣಿ ಅಥವಾ ಪಕ್ಷಿಗಳಿಗೆ ಮಡಕೆಯಲ್ಲಿ ಕುಡಿಯುವ ನೀರನ್ನು ಒದಗಿಸಿ ಜೀವನವನ್ನು ಸಂರಕ್ಷಿಸಿಸುವ ಕಾರ್ಯಕ್ರಮದ ಉದ್ಘಾಟನೆ ವಿರಾಜಪೇಟೆಯ ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಎಸ್ಎಸ್ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ಕಮರುದ್ದೀನ್ ಅನ್ವಾರಿ ಸಖಾಫಿ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ನೆಲ್ಲಿಹುದಿಕೇರಿ ಸಂದೇಶ ಭಾಷಣ ಮಾಡಿದರು. ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿಗಳಾದ ಕಮರುದ್ದೀನ್ ಅನ್ವಾರಿ ಅಹ್ಸನಿ, ಬಶೀರ್ ಹೊದವಾಡ, ಜುನೈದ್ ಅನ್ವಾರಿ ಅಹ್ಸನಿ, ಹಸೈನಾರ್ ಹೊಸತೋಟ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.