Kodagu

ಪತ್ತ್ ಕಟ್ಟ್ ನಾಡ್ ತಂಡದಿಂದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ

admincoorgdaily

ಪತ್ತ್ ಕಟ್ಟ್ ನಾಡ್   ತಂಡದಿಂದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ

ಪೊನ್ನಂಪೇಟೆ:ತಾಲೂಕಿನ ಬೆಕ್ಕೆಸೂಡ್ಲೂರು ಗ್ರಾಮದ ಪತ್ತ್ ಕಟ್ಟ್ ನಾಡ್ ಕ್ರೀಡಾ ಕೂಟ ತಂಡದಿಂದ ಬೆಕ್ಕೆಸೂಡ್ಲೂರು ಶಾರದ ಪ್ರೌಢಶಾಲೆಯ ಮೈದಾನದಲ್ಲಿ ಜಿಲ್ಲಾ ಮಟ್ಟದ ಮುಕ್ತ ಪುರುಷರ ವಾಲಿಬಾಲ್ ಪಂದ್ಯಾವಳಿಯನ್ನು ತಾ. 17 ಮತ್ತು 18ರಂದು ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಮಲ್ಲಮಾಡ ಸಂತೋಷ್ ಅವರು ತಿಳಿಸಿದರು.

ಈ ಬಗ್ಗೆ ಕ್ರೀಡಾಕೂಟದ ಪೂರ್ವಭಾವಿ ಸಭೆ ಬೆಕ್ಕೆಸೂಡ್ಲೂರು ಗ್ರಾಮದ ಮಂದತವ್ವ ಸಭಾಂಗಣದಲ್ಲಿ ನಡೆದು, ಕ್ರೀಡಾ ಕೂಟದ ಬಗ್ಗೆ ಅವರು ಮಾಹಿತಿ ನೀಡಿದರು.ವಾಲಿಬಾಲ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ತಾ. 10ರೊಳಗೆ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ ಮೊದಲು ನೋಂದಾವಣೆ ಮಾಡುವ 24 ತಂಡಗಳಿಗೆ ಮಾತ್ರ ಪ್ರವೇಶಾತಿ ವಿರುತ್ತದೆ. ಪ್ರಥಮ ಬಹುಮಾನ ರೂ 40 ಸಾವಿರ, ದ್ವಿತೀಯ ಬಹುಮಾನ ರೂ.30 ಸಾವಿರ, ಮೂರನೇ ಮತ್ತು ನಾಲ್ಕನೇ ಬಹುಮಾನವಾಗಿ ತಲಾ ಹತ್ತು ಸಾವಿರ ಹಾಗೂ ಎಲ್ಲಾ ನಗದು ಬಹುಮಾನದೊಂದಿಗೆ ಟ್ರೋಪಿ ಇರುತ್ತದೆ ಎಂದು ವಿವರಿಸಿದರು.

 ಕ್ರೀಡಾಕೂಟದ ಅಧ್ಯಕ್ಷ ಸ್ಥಾನ ತಾಣಚ್ಚಿರ ನಿರನ್ ಮಾಚಯ್ಯ ಅವರು ಮಾತನಾಡಿ ಪ್ರವೇಶ ಶುಲ್ಕ ರೂ. 2 ಸಾವಿರ ಇರುತ್ತದೆ. ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲಾ ಜಾತಿ ಜನಾಂಗದ ಧರ್ಮದ ತಂಡಗಳು ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದ ಅವರು ಕ್ರೀಡಾ ಕೂಟಕ್ಕೆ ತಂಡಗಳು ಹಾಗೂ ಗ್ರಾಮಸ್ಥರ ಸಹಕಾರ ಕೋರಿದರು.

ಹೆಚ್ಚಿನ ವಿವರ ಮತ್ತು ಪ್ರವೇಶಾತಿ ಗುಲ್ಶನ್ ಗಣಪತಿ - 9740048678, ಮಾಚಿಮಾಡ ಕಾರ್ಯಪ್ಪ - 9740881917, ಸನತ್ ಪೂಣಚ್ಚ - 9482310974, ನಿಖಿಲ್ ಸೋಮಣ್ಣ - 9686724532 ಅವರನ್ನು ಸಮಾರ್ಕಿಸಲು ಕೋರಲಾಗಿದೆ. ಈ ಸಂದರ್ಭ ಕ್ರೀಡಾಕೂಟದ ಕಾರ್ಯದರ್ಶಿ ತಾಣಚ್ಚಿರ ನಿಖಿಲ್ ಸೋಮಣ್ಣ, ಖಜಾಂಚಿ ಮಾಚಿಮಾಡ ಸಂಪತ್ ಸೋಮಣ್ಣ ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.