ಮಹಿಳಾ ದಸರಾ ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಿದ ಬಹುಮಾನ‌ವೇನು‌ ಗೊತ್ತೇ! ಮಹಿಳಾ ದಸರಾಕ್ಕೆ ಅನುದಾನ ತಡೆಹಿಡಿಯಲು ವಿಜೇತರ ಆಗ್ರಹ

ಮಹಿಳಾ ದಸರಾ ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಿದ ಬಹುಮಾನ‌ವೇನು‌ ಗೊತ್ತೇ!  ಮಹಿಳಾ ದಸರಾಕ್ಕೆ ಅನುದಾನ ತಡೆಹಿಡಿಯಲು ವಿಜೇತರ ಆಗ್ರಹ

ಮಡಿಕೇರಿ: ಭಾನುವಾರ ನಗರದ ಗಾಂಧಿ ಮೈದಾನದಲ್ಲಿ ನಡೆದ ಮಹಿಳಾ ದಸರಾ ಕ್ರೀಡಾಕೂಟದ ವಿಜೇತರಿಗೆ ನೀಡಿದ ಬಹುಮಾನ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಿಜೇತರು, ಮಹಿಳಾ ದಸರಾಕ್ಕೆ ಸರ್ಕಾರದಿಂದ ನೀಡುವ ಅನುದಾನವನ್ನು ತಡೆಹಿಡಿಯಬೇಕು ಎಂದು ವಿಜೇತರು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ದಸರಾ ದಿನದಂದು ಜಿಲ್ಲೆಯ ವಿವಿಧೆಡೆಯಿಂದ ಸಂಭ್ರಮಿಸಲು ಆಗಮಿಸಿದ್ದೆವು. ನಾವು ಕೂಡ ವರ್ಷಂಪ್ರತಿಯಂತೆ ಈ ವರ್ಷವು ಮಹಿಳಾ ದಸರಾದಲ್ಲಿ ಉತ್ಸಾವಹದಿಂದ ಬಹಳ ಖುಷಿಯಿಂದ ಪಾಲ್ಗೊಂಡಿದ್ದೆವು. ಸಮಿತಿಯಿಂದ ಹತ್ತಾರು ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಆದರೆ, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಾಜಿನ ಗ್ಲಾಸ್, ಬೌಲ್, ಹರಿದ ಸೀರೆಯನ್ನು ನೀಡಲಾಗಿದೆ. ಅಲ್ಲದೇ, ಸಂಸ್ಥೆಯೊಂದು ಗಿಫ್ಟ್ ಹ್ಯಾಂಪರ್ ಆಗಿ ನೀಡಲು ಕೊಟ್ಟಿದ್ದ ವಸ್ತುಗಳನ್ನು ವಿಜೇತರಿಗೆ ನೀಡಲಾಗಿದೆ. ಇದು ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ಈ ಹಿನ್ನೆಲೆ ಸರ್ಕಾರದಿಂದ ನೀಡುವ ಅನುದಾನವನ್ನು ತಡೆಹಿಡಿಯಬೇಕು ಎಂದು ಮಹಿಳಾದಸರಾದಲ್ಲಿ ಬಹುಮಾನ ಪಡೆದ ರೇಖಾ ಆಗ್ರಹಿಸಿದರು.

ಮತ್ತೋರ್ವ ವಿಜೇತೆ ಧೀರ್ಘ ಮಾತನಾಡಿ, ಗಾಂಧಿ ಮೈದಾನದಲ್ಲಿ ನಡೆದ ಡಾಗ್ ಶೋನಲ್ಲಿ ವಿಜೇತ ಶ್ವಾನಕ್ಕೆ ೧೦,೦೦೦ ಬಹುಮಾನ ನೀಡಲಾಗಿದೆ. ನಾವು ಅಷ್ಟೊಂದು ಕೇಳುವುದಿಲ್ಲ. ಆದರೆ, ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಾಗ ಅದು ನಮ್ಮ ನೆನಪಿನಲ್ಲಿ ಉಳಿಯಬೇಕು. ಆಯೋಜಕರು ಗಾಜಿನನ ಗ್ಲಾಸ್, ಬೌಲ್ ಬದಲಾಗಿ ಸಣ್ಣ ಮೊತ್ತ ಟ್ರೋಫಿ ನೀಡಿದ್ದರೆ ಮಹಿಳೆಯರಿಗೆ ಸಂತೋಷವಾಗುತ್ತಿತ್ತು ಎಂದರು.