ವಿರಾಜಪೇಟೆಯ ಡಾ.ಹೇಮಂತ್ ಕುಮಾರ್ ಎಂ.ಎನ್ ಅವರಿಗೆ ಪಿಎಚ್ ಡಿ ಪದವಿ

Feb 3, 2026 - 11:11
 0  808
ವಿರಾಜಪೇಟೆಯ ಡಾ.ಹೇಮಂತ್ ಕುಮಾರ್ ಎಂ.ಎನ್ ಅವರಿಗೆ ಪಿಎಚ್ ಡಿ ಪದವಿ

ವಿರಾಜಪೇಟೆ : ಮೈಸೂರಿನ ಕರ್ನಾಟಕ ‌ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿರಾಜಪೇಟೆಯ ಡಾ.ಹೇಮಂತ್ ಕುಮಾರ್ ಎಂ.ಎನ್ ಅವರಿಗೆ ಪಿಎಚ್ ಡಿ ಪದವಿಯ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ವಿರಾಜಪೇಟೆಯ ಸಂತ ಅನ್ನಮ್ಮ ಪದವಿ‌ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಹೇಮಂತ್ ‌ಕುಮಾರ್ ಎಂ.ಎನ್ ಅವರು 'ಕೊಡವ ಹಾಗೂ ತುಳು ಸಂಸ್ಕೃತಿಗಳ ತೌಲನಿಕ ಅಧ್ಯಯನ' ಎಂಬ ವಿಷಯದ ಕುರಿತು ಅಧ್ಯಯನ‌ ನಡೆಸಿ ಸಲ್ಲಿಸಿದ್ದ ಸಂಶೋಧನ ಮಹಾಪ್ರಬಂಧವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಅಂಗೀಕರಿಸಿ ಡಾಕ್ಟರೇಟ್ ಪದವಿಯನ್ನು ನೀಡಿತ್ತು. ಇವರಿಗೆ ಪ್ರೊ. ಕವಿತ ರೈ ಅವರು ಮಾರ್ಗದರ್ಶನ‌ ನೀಡಿದ್ದರು. ಡಾ. ಹೇಮಂತ್ ಕುಮಾರ್ ಅವರು ನಾರಾಯಣ್ ಶೆಟ್ಟಿ ಎಂ ಹಾಗೂ ಬಿ.ಎಸ್. ಕುಸುಮ ದಂಪತಿಗಳ ಪುತ್ರ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0