ಮಡಿಕೇರಿ ಆರ್.ಟಿ.ಒ ಕಛೇರಿಗೆ ಡಾ.ಮಂತರ್ ಗೌಡ ರವರಿಂದ 4ಕೋಟಿ 30 ಲಕ್ಷ ರೂ ವೆಚ್ಚದ ಸೆನ್ಸಾರ್ ಟೆಸ್ಟಿಂಗ್ ಟ್ರಾಕ್ ಕೊಡುಗೆ
ಮಡಿಕೇರಿ: ಮಡಿಕೇರಿಯಲ್ಲಿರುವ ಆರ್.ಟಿ.ಒ ಕಛೇರಿಯಲ್ಲಿ 4ಕೋಟಿ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸೆನ್ಸಾರ್ ಟೆಸ್ಟಿಂಗ್ ಟ್ರಾಕ್ ನಿರ್ಮಾಣ ಕಾಮಗಾರಿಗೆ ಇಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಭೂಮಿಪೂಜೆ ನೆರವೇರಿಸಿದರು.
ಹಿಂದಿನ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರಲ್ಲಿ ಕೊಡಗು ಜಿಲ್ಲೆಯಲ್ಲಿ ವಾಹನ ಚಾಲನೆ ಲೈಸೆನ್ಸ್ ಪಡೆಯುವರು ಕಚ್ಚಾ ರಸ್ತೆಯಲ್ಲಿ ಟೆಸ್ಟಿಂಗ್ ರೈಡ್ ಮಾಡುವಾಗ ಆಗುತ್ತಿದ್ದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಆಧುನಿಕ ಟ್ರಾಕ್ ನಿರ್ಮಾಣಕ್ಕೆ ಡಾ ಮಂತರ್ ಗೌಡ ರವರು ಮನವಿ ಮಾಡಿದ್ದರು.
ಅದರಂತೆ ರಾಮಲಿಂಗ ರೆಡಿಯವರು ಸಾರಿಗೆ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿದ್ದು ಈಗಿನ ಸಾರಿಗೆ ಸಚಿವರಾದ ಬೈರತಿ ಸುರೇಶ್ ರವರು ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆ ನೀಡಿ ಸಹಕಾರ ನೀಡಿದ್ದಾರೆ ಎಂದು ಮಂತರ್ ಗೌಡ ರವರು ವಿವರಣೆ ನೀಡಿದರು.
ಕೆ.ಎ. 12 ಅನ್ನುವುದು ಕೇವಲ ವಾಹನ ನೊಂದಣಿ ಸಂಖ್ಯೆ ಯಾಗಿರದೆ ಒಂದು ರೀತಿಯಲ್ಲಿ ಘನತೆ ಹಾಗೂ ಗೌರವವನ್ನು ಬಿಂಬಿಸುವ ಸಂಕೇತವಾಗಿದೆ. ಇಂತಹ. ಆರ್ ಟಿ. ಒ ಕಛೇರಿಗೆ ಸುಸಜ್ಜಿತ ಟೆಸ್ಟಿಂಗ್ ಟ್ರಾಕ್ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು ತೃಪ್ತಿ ತಂದಿದೆ ಎಂದು ಡಾ ಮಂತರ್ ಗೌಡ ಸಂತಸ ವ್ಯಕ್ತಪಡಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರವರು ಎಸ್.ಟಿ.ಸತೀಶ್ ರವರು ಮಾತನಾಡಿ ಶಾಸಕರಾದ ಡಾ ಮಂತರ್ ಗೌಡ ರವರ ಪ್ರಯತ್ನದಿಂದ ಮಡಿಕೇರಿ ಆರ್.ಟಿ.ಒ ಕಛೇರಿಗೆ ಬಹುಕೋಟಿ ಅನುದಾನ ಬಂದಿದ್ದು ಅದರ ಸಮರ್ಪಕ ಬಳಕೆಗೆ ಜಾಗೃತಿ ವಹಿಸುವುದಾಗಿ ತಿಳಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ಡಾ ಮಂತರ್ ಗೌಡ ರವರು ವಿವಿಧ ಇಲಾಖೆಗಳಿಂದ ದೊಡ್ಡ ಮೊತ್ತದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕಾರ್ಯಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ,ಹೊದ್ದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹೆಚ್.ಎ.ಹಂಸ,ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ,ಅರ್.ಟಿ.ಒ ಸೂಪರಿಂಟೆಂಡೆಂಟ್ ಶ್ರೀಮತಿ ಸಲೀಮಾ,ಮೋಹನ್ ಕುಮಾರ್, ಇನ್ಸ್ಪೆಕ್ಟರ್ ಗಳಾದ ಮೋಹನ್ ಕುಮಾರ್,ಪ್ರದೀಪ್ ಕುಮಾರ್,ಸಿಬ್ಬಂದಿಗಳಾದ ರಾಧ,ಮಹದೇವ ಸ್ವಾಮಿ,ಸಂತೋಷ್ ಕುಮಾರ್,ಶೈಲೇಶ್, ರೀಟಾ,ಸ್ಲೀಮನ್ ಕುಮಾರ್ ಸೌಮ್ಯ ಪ್ರಮುಖರಾದ ಜಾನ್ಸನ್ ಪಿಂಟೋ, ವಿ.ಜಿ.ಮೋಹನ್,ಕೋಚನ ಹರಿಪ್ರಸಾದ್, ಮಂಡಿರ ಸದಾ ಮುದ್ದಪ್ಪ , ಜಿ.ಸಿ.ಜಗದೀಶ್ ಕೋಚನ ಚೇತನ್, ನಂದಿನೆರವಂಡ ಮಧು,ಶ್ರೀಮತಿ ಶಶಿ, ಕೊತ್ತೋಳಿ ಕವನ್, ಅರ್ಜುನ್,ಚರಣ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

