ಕೊಡ್ಲಿಪೇಟೆಯಲ್ಲಿ ಈದ್-ಮಿಲಾದ್ ರ‍್ಯಾಲಿ
ಕೊಡ್ಲಿಪೇಟೆ: ಈದ್-ಮಿಲಾದ್ ಅಂಗವಾಗಿ ಭಕ್ತಿಭಾವ ಹಾಗೂ ಸಂಭ್ರಮದಿಂದ ಭವ್ಯ ರ‍್ಯಾಲಿ ನಡೆಯಿತು. ಕೊಡ್ಲಿಪೇಟೆಯ ಜಾಮೀಯ ಮಸೀದಿಯಿಂದ ರ‍್ಯಾಲಿಗೆ ಚಾಲನೆ ದೊರೆತಿದ್ದು, ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ರ‍್ಯಾಲಿಯು ಕೊಡ್ಲಿಪೇಟೆ ಬಸ್ ನಿಲ್ದಾಣದ ಮೂಲಕ ಪೆಟ್ರೋಲ್ ಬಂಕ್‌ವರೆಗೆ ತೆರಳಿ, ಅಲ್ಲಿಂದ ಹಿಂತಿರುಗಿ ಶಾಂತಪುರ ಕಾನ್ವೆಂಟ್ ಸರ್ಕಲ್‌ವರೆಗೆ ಸಾಗಿತು.
ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಬೈಸಿಕಲ್‌ಗಳು, ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗಿದ್ದು, ರ‍್ಯಾಲಿಗೆ ವಿಶೇಷ ಮೆರುಗು ತಂದವು. ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನದ ಸಂದೇಶವನ್ನು ಸಾರುವ ಘೋಷಣೆಗಳು ಹಾಗೂ ಮೀಲಾದ್ ಶುಭಾಶಯಗಳೊಂದಿಗೆ ರ‍್ಯಾಲಿ ಶಾಂತಿಯುತವಾಗಿ ನಡೆಯಿತು.
ಅಲಂಕರಿಸಲಾದ ವಾಹನಗಳು ಸಾರ್ವಜನಿಕರ ಗಮನ ಸೆಳೆದವು. ರ‍್ಯಾಲಿಯಲ್ಲಿ ಉತ್ತಮವಾಗಿ ಅಲಂಕರಿಸಲಾದ ವಾಹನಗಳಿಗೆ ಬಹುಮಾನ ನೀಡುವ ಮೂಲಕ ಭಾಗವಹಿಸಿದವರನ್ನು ಪ್ರೋತ್ಸಾಹಿಸಲಾಯಿತು.
ರ‍್ಯಾಲಿಯು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತ ವಾಗಿ ನಡೆಯಲು ಆಯೋಜಕರು ಸಹಕಾರ ನೀಡಿದರು.
ರ‌್ಯಾಲಿಯಲ್ಲಿ ಜಾಮೀಯಾ ಮಸ್ಜಿದ್ ಧರ್ಮಗುರುಗಳಾದ ಜಬೀರ್ ರಝ್ವಿ ಮದ್ರಸ ಮುಖ್ಯ ಅದ್ಯಾಪಕ ಸಯ್ಯದ್ ಅಬ್ದುಲ್ ಶುಕೂರ್ ,ಜಾಮೀಯಾ ಮಸೀದಿ ಆಡಳಿತ ಸಮಿತಿ ಅದ್ಯಕ್ಷ ಜಾಫರ್ ಸಾದಿಕ್ ,ಉಪಾಧ್ಯಕ್ಷ ಸರ್ದಾರ್ ,ಕಾರ್ಯದರ್ಶಿ ಜಮ್ಸೀದ್ ,ಖಜಾಂಜಿ ಶಾಹಿದ್ ,ಇತ್ತೆಹಾದುಲ್ ಮುಸ್ಲಿಂಮೀನ್ ಅಹ್ಲೆಸುನ್ನತ್ ಮದ್ರಸ ಸಮಿತಿ ಅದ್ಯಕ್ಷರಾದ ಶಾಹಿದ್ ರಹ್ಮತುಲ್ಲಾ ,ಉಪಾಧ್ಯಕ್ಷ ಹನೀಫ್ ,ಕಾರ್ಯದರ್ಶಿ ಪ್ಯೆರೋಝ್ ಖಾದ್ರಿ ,ಜೋತೆ ಕಾರ್ಯದರ್ಶಿ ಅಬ್ರಾರ್ ಬಾಷ ,ಖಜಾಂಜಿ ಖಲೀಲ್ ಆಹ್ಮದ್ , ಸದಸ್ಯರುಗಳಾದ ಅವೇಜ್ ರಝಾ ,ಜುಬ್ಯೆರ್ ,ಆಮಾನ್ ,ಸಿದ್ದೀಕ್ ,ಆಕೀಬ್ ,ನಯಾಜ್ ,ಶಕೀಲ್ ಹಾಗೂ ಮುಖಂಡರಾದ ಔರಂಗಜೇಬ್ ,ವಹಾಬ್ ಮುಂತಾದವರು ಇದ್ದರು.
ಶನಿವಾರಸಂತೆ ಪೊಲೀಸ್ ಠಾಣೆಯ ವ್ರತ್ತ ನಿರೀಕ್ಷಕ ವಿ.ಕ್ರಷ್ಣರಾಜ್ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಅಗತ್ಯ ಭದ್ರತೆ ಕಲ್ಪಿಸಿದರು, ಈದ್-ಮಿಲಾದ್ ಪ್ರಯುಕ್ತ ಬುಧವಾರ ಸಂಜೆ ಮದ್ರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗುರುವಾರ ರಾತ್ರಿ ದಾರ್ಮಿಕ ಪ್ರವಚನ ಮತ್ತು ಅನ್ನದಾನ ಏರ್ಪಡಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
