Kodagu

ಆನೆ ಕಂದಕ, ಬ್ಯಾರಿಕೇಡ್ ನಿರ್ವಹಣೆ ನಿರ್ಲಕ್ಷ್ಯ ಸರ್ಕಾರದ ವೈಫಲ್ಯದಿಂದ ಕೊಡಗಿನಲ್ಲಿ ಆನೆ ದಾಳಿ ಹೆಚ್ಚಳ: ಬಿಜೆಪಿ ಕಿಡಿ

admincoorgdaily

ಆನೆ ಕಂದಕ, ಬ್ಯಾರಿಕೇಡ್ ನಿರ್ವಹಣೆ ನಿರ್ಲಕ್ಷ್ಯ ಸರ್ಕಾರದ ವೈಫಲ್ಯದಿಂದ ಕೊಡಗಿನಲ್ಲಿ ಆನೆ ದಾಳಿ ಹೆಚ್ಚಳ: ಬಿಜೆಪಿ ಕಿಡಿ

ಮಡಿಕೇರಿ: ೨೦೧೦ರಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ಯೋಜನೆಯ ನಿರ್ವಹಣೆಯನ್ನು ಪ್ರಸ್ತುತ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದ್ದರಿಂದ ಕೊಡಗಿನಲ್ಲಿ ಕಾಡಾನೆ ದಾಳಿ ಮಿತಿಮೀರಿದೆ ಎಂದು ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಆರೋಪಿಸಿದರು.

ಬಿಜೆಪಿ ಆಡಳಿತದಲ್ಲಿ ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ನಿರ್ವಹಣೆ ಇದ್ದಾಗ ಸಂಘರ್ಷ ಕಡಿಮೆಯಿತ್ತು. ಈಗ ನಿರ್ವಹಣೆ ಇಲ್ಲದ ಕಾರಣ ತಿಂಗಳಿಗೆ ಇಬ್ಬರು ಬಲಿಯಾಗುತ್ತಿದ್ದಾರೆ. ವನ್ಯಜೀವಿ ನಿಯಂತ್ರಣಕ್ಕೆ ೫ ವರ್ಷಕ್ಕೆ ೧೫೦೦ ಕೋಟಿ ಘೋಷಿಸಿದ್ದರೂ ಕಾಮಗಾರಿ ಎಲ್ಲಿ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕೊಡಗು, ಹಾಸನ, ಚಿಕ್ಕಮಗಳೂರು ಸೇರಿ ೫ ಜಿಲ್ಲೆಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ರಾಬೀನ್ ದೇವಯ್ಯ ಇದ್ದರು.