ಮಂಡ್ಯದಲ್ಲಿ ಭೀಕರ ಅಪಘಾತ: ಮಡಿಕೇರಿ ಎಸ್‌ಪಿ ಕಚೇರಿ ಸಿಬ್ಬಂದಿಗೆ ಗಾಯ

Jun 15, 2026 - 14:29
 0  1.8k
ಮಂಡ್ಯದಲ್ಲಿ ಭೀಕರ ಅಪಘಾತ: ಮಡಿಕೇರಿ ಎಸ್‌ಪಿ ಕಚೇರಿ ಸಿಬ್ಬಂದಿಗೆ ಗಾಯ

ಮಂಡ್ಯ: ಮಂಡ್ಯದ ಬಳಿ ಭಾನುವಾರ ಮಧ್ಯಾಹ್ನ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮಡಿಕೇರಿ ಎಸ್‌ಪಿ ಕಚೇರಿ ನೌಕರ ದಂಪತಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ನಂದಿನೆರವಂಡದ ತಿಮ್ಮಯ್ಯ ಮತ್ತು ಅವರ ಪತ್ನಿ ಕಾವ್ಯ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

 ತಿಮ್ಮಯ್ಯ ಅವರು ಮಡಿಕೇರಿ ಜಿಲ್ಲಾ ಎಸ್‌.ಪಿ ಕಚೇರಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪಘಾತದ ತಕ್ಷಣ ಗಾಯಾಳುಗಳನ್ನು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 6
Wow Wow 0