ದಿವಂಗತ ಎ.ಕೆ ಸುಬ್ಬಯ್ಯರವರ ಸ್ಮರಣಾರ್ಥ, ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ: ಕಲ್ಲುಬಾಯ್ಸ್ ತಂಡಕ್ಕೆ ಶುಭಕೋರಿದ ಶಾಸಕ ಎಎಸ್ ಪೊನ್ನಣ್ಣ

Nov 22, 2025 - 18:25
 0  381
ದಿವಂಗತ ಎ.ಕೆ ಸುಬ್ಬಯ್ಯರವರ ಸ್ಮರಣಾರ್ಥ, ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ: ಕಲ್ಲುಬಾಯ್ಸ್ ತಂಡಕ್ಕೆ ಶುಭಕೋರಿದ  ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ;ದಿವಂಗತ ಎ.ಕೆ ಸುಬ್ಬಯ್ಯರವರ ಸ್ಮರಣಾರ್ಥ, ಕಲ್ಲು ಬಾಯ್ಸ್, ಕಲ್ಲುಬಾಣೆ ಇವರು ಆಯೋಜಿಸಿರುವ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟವನ್ನು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ವೀಕ್ಷಿಸಿದರು ಇದೇ ತಿಂಗಳ 20 ರಂದು ಆರಂಭವಾದ ಈ ಪಂದ್ಯಾಟವು, ನಾಲ್ಕು ದಿನಗಳ ಕಾಲ ಸಾಗಿ ದಿನಾಂಕ 23 ರಂದು ಫೈನಲ್ ಪಂದ್ಯಾಟ ನಡೆಯಲಿದ್ದು, ಆ ಸಂದರ್ಭದಲ್ಲಿ ಶಾಸಕರು ಕ್ಷೇತ್ರದಲ್ಲಿ ಅಲಭ್ಯವಿರುವ ಕಾರಣ, ಇಂದೇ ಮೈದಾನಕ್ಕೆ ಆಗಮಿಸಿ ಪಂದ್ಯಾಟವನ್ನು ವೀಕ್ಷಿಸುತ್ತಾ ಆಟಗಾರರಿಗೆ ಶುಭ ಕೋರಿದರು. 

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಡಿಸಿಸಿ ಸದಸ್ಯರು ಅಬ್ದುಲ್ ರೆಹಮನ್, ವಿರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಶಬೀರ್, ಪಕ್ಷದ ಪ್ರಮುಖರು ಚೆಕು, ಕುಂಡಚ್ಚಿರ ಮಂಜು ದೇವಯ್ಯ, ಸಂತೋಷ್ , ಅಯೂಬ್, ಹರೀಶ್, ಕಾರ್ಯಕ್ರಮ ಆಯೋಜಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0